ಕನ್ನಡ ವಾರ್ತೆಗಳು

108 ವರ್ಷದ ಶತಾಯುಷಿ ವೃದ್ಧೆ ನಿಧನ

Pinterest LinkedIn Tumblr

BYN-Nagamma Shetty_Death

ಕುಂದಾಪುರ: ಕುಂದಾಪುರ ತಾಲೂಕಿನ ಕಾಲ್ತೋಡು ಗ್ರಾಮದ ಹಳೇಕಾಲ್ತೋಡುವಿನ 108 ವರ್ಷದ ಹಿರಿಯಜ್ಜಿ, ಶತಾಯುಷಿ ಶಿರೂರು ಹೊಸ್ಮನೆ ನಾಗಮ್ಮ ಶೆಟ್ಟಿ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಕೃಷಿಕುಟುಂಬಕ್ಕೆ ಸೇರಿದ ಇವರು ತಮ್ಮ ಜೀವನದ ಕೊನೆಯ ಕಾಲದವರೆಗೂ ಆರೋಗ್ಯವಂತರಾಗಿದ್ದ ಇವರು ಐದುತಲೆಮಾರು ನೋಡಿದವರು. ಕೃಷಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದರು. ಹಿಂದೆ ಊರಿನ ನಾಟಿ ಪ್ರಸೂತಿ ವೈದ್ಯೆಯಾಗಿದ್ದು ಪರಿಸರದವರ ಪ್ರೀತಿಗೆ ಪಾತ್ರರಾಗಿದ್ದರು.

ಮೃತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Write A Comment