ಕನ್ನಡ ವಾರ್ತೆಗಳು

ಪ್ರತಿದಿನ 2 ಗಂಟೆ ನಡಿಗೆಯಿಂದ ಮಧುಮೇಹದಿಂದ ಮುಕ್ತರಾಗಲು ಸಾಧ್ಯ

Pinterest LinkedIn Tumblr

diabetes_sugar_walk

ಮಂಗಳೂರು ಜುಲೈ.03: ಪ್ರತಿದಿನ ಮುಂಜಾನೆ ಅಥವಾ ಸಂಜೆ ವೇಳೆ 2ಗಂಟೆಗಳ ಕಾಲ ನಡಿಗೆ, ಹಿತ ಮಿತವಾದ ಆಹಾರ ಸೇವನೆಯಿಂದ ಮಧುಮೇಹದಿಂದ ಬಳಲುತ್ತಿರುವವರು ಶೇ. 75ರಷ್ಟು ಗುಣಮುಖರಾಗಲು ಸಾಧ್ಯವೆಂದು ಕೇರಳದ ಪ್ರಕೃತಿ ಚಿಕಿತ್ಸಕ ಡಾ.ಜೇಕಬ್ ವಡಕಂಬೇರಿ ತಿಳಿಸಿದರು.

ಮದುಮೇಹ ರೋಗವು ಇಂದು ಮಕ್ಕಳಿಂದ ಮುದುಕರವರೆಗೂ ಕಂಡುಬರುವುದು ಸರ್ವೆ ಸಾಮಾನ್ಯ ಸಂಗತಿಯಾಗಿದೆ, ಇದರಿಂದ ಗಾಬರಿಪಡುವ ಅವಶ್ಯಕತೆಯಿಲ್ಲ, ಸಾಧ್ಯವಾದಷ್ಟು ಮಟ್ಟಿಗೆ ಸಮಾದಾನಚಿತ್ತದಿಂದ ಇರುವುದು, ಆಹಾರ ಸೇವನೆಯಲ್ಲಿ ಸಿಹಿ, ಉಪ್ಪು, ಖಾರ ಇವುಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸುವುದು, ಯತೇಚ್ಛವಾಗಿ ನೀರನ್ನು ಕುಡಿಯುವುದು, ತಮ್ಮ ಆಹಾರ ಸೇವನೆಯಲ್ಲಿ ಮೆಂತ್ಯ ಸೊಪ್ಪು, ನುಗ್ಗೆ ಸೊಪ್ಪು, ಗೋಣಿಸೊಪ್ಪು, ಕರಿಬೇವಿನ ಸೊಪ್ಪುಗಳೊಂದಿಗೆ ಹಾಗಲಕಾಯಿ, ಪಡುವಲಕಾಯಿ, ಸೋರೆಕಾಯಿಗಳನ್ನು ಬಳಸುವುದು ಉತ್ತಮ ಇಂದರೊಂದಿಗೆ ಮಳೆಗಾಲದಲ್ಲಿ ಸಿಗುವ ನೇರಳೆ, ಪಪ್ಪಾಯಿ, ಸೀಬೆ ಹಣ್ಣುಗಳ ಸೇವನೆ, ವೈದ್ಯರ ಸಲಹೆ ಹಾಗೂ ಅವರ ಮಾರ್ಗದರ್ಶನದಂತೆ ನಡೆದುಕೊಂಡಲ್ಲಿ ಮದುಮೇಹ ರೋಗದಿಂದ ಶೇ. 75ರಷ್ಟು ಮುಕ್ತರಾಗಬಹುದು.

Write A Comment