ಕನ್ನಡ ವಾರ್ತೆಗಳು

ಇಂದಿನಿಂದ ಮೊಬೈಲ್ ಪೋರ್ಟಬಿಲಿಟಿ ಜಾರಿ

Pinterest LinkedIn Tumblr

mobile_Tower-Taggarse

ನವದೆಹಲಿ, ಜುಲೈ.03: ಮೊಬೈಲ್ ಬಳಕೆದಾರರಿಗೆ ಮತ್ತಷ್ಟು ಸಿಹಿ ಸುದ್ದಿ. ದೇಶಾದ್ಯಂತ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ವ್ಯವಸ್ಥೆ ಇಂದಿನಿಂದ ಜಾರಿಗೆ ಬಂದಿದ್ದು, ಗ್ರಾಹಕರು ಸೇವೆಯನ್ನು ಇಂದಿನಿಂದಲೇ ಪಡೆದುಕೊಳ್ಳಬಹುದಾಗಿದೆ.ಮೊಬೈಲ್ ಸೇವೆ ಒದಗಿಸುವ ಸಂಸ್ಥೆಗಳಾದ ಏರ್‌ಟೆಲ್, ವೋ‌ಡಾಫೋನ್, ಐಡಿಯಾ, ರಿಲಯನ್ಸ್, ಬಿಎಸ್‌ಎನ್ಎಲ್, ಎಂಟಿಎನ್‌ಎಲ್ ತನ್ನ ಗ್ರಾಹಕರಿಗೆ ಇಂದಿನಿಂದ ಸೇವೆಯನ್ನು ಪರಿಚಯಿಸಲು ನಿರ್ಧರಿಸಿದೆ.

ಮೊಬೈಲ್ ನಂಬರ್ ಪೋರ್ಟಬಿಲಿಟಿ ವ್ಯವಸ್ಥೆಯಿಂದು ಒಂದು ಟೆಲಿಕಾಂ ಸರ್ಕಲ್‌ನಿಂದ ದೇಶದ ಯಾವುದೇ ಟೆಲಿಕಾಂ ಸರ್ಕಲ್‌ಗೆ ಗ್ರಾಹಕರು ತೆರಳಿದಾಗ ಅದೇ ಸಂಖ್ಯೆಯನ್ನು ಉಳಿಸಿಕೊಳ್ಳಬಹುದಾಗಿದೆ.ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯಗಳನ್ನು ಕಲ್ಪಿಸಿ ಅವರ ಪ್ರತಿಕ್ರಿಯೆಯನ್ನು ಗಮನಿಸುತ್ತೇವೆ ಎಂದು ವೋಡಾಫೋನ್ ಮುಖ್ಯ ಅಧಿಕಾರಿ ವಿವೇಕ್ ಮಥೂರ್ ತಿಳಿಸಿದ್ದಾರೆ. ಅಲ್ಲದೇ ಏರ್‌ಟೆಲ್ ಪೋರ್ಟ್ ಆಗುವ 24 ಗಂಟೆಗಳವರೆಗೂ ಉಚಿತ ಇನ್‌ಕಮಿಂಗ್ ಸೌಲಭ್ಯವನ್ನು ಘೋಷಿಸಿದೆ.

ಕಳೆದ ಏಪ್ರಿಲ್ ಅಂತ್ಯಕ್ಕೆ ಭಾರತದಲ್ಲಿ 97.33 ಕೋಟಿ ಮಂದಿ ಮೊಬೈಲ್ ಬಳಸುತ್ತಿದ್ದಾರೆ ಎನ್ನಲಾಗಿದೆ.

Write A Comment