ಕನ್ನಡ ವಾರ್ತೆಗಳು

ಇನ್‌ಲ್ಯಾಂಡ್ ವಿಂಡ್‌ಸರ್ಸ್ ಕಟ್ಟಡಕ್ಕೆ ಸಿಲಿಕಾನ್ ಇಂಡಿಯಾದಿಂದ ಪ್ರಶಸ್ತಿ ವರ್ಷದ ಅತ್ಯುತ್ತಮ ಲಕ್ಷುರಿ ಅಪಾರ್ಟ್‌ಮೆಂಟ್ – ಜು.10 ರಂದು ಪ್ರಶಸ್ತಿ ಪ್ರದಾನ

Pinterest LinkedIn Tumblr

Inland_windsor_1

ಮಂಗಳೂರು, ಜೂ.29 : ನಗರದ ಪದವಿನಂಗಡಿಯಲ್ಲಿ ತಲೆ ಎತ್ತಿ ನಿಂತಿರುವ ಪ್ರತಿಷ್ಠಿತ ಬಹುಮಹಡಿ ವಸತಿ ಕಟ್ಟಡ ಇನ್‌ಲ್ಯಾಂಡ್ ಬಿಲ್ಡರ್ಸ್ ಯಾಂಡ್ ಡೆವಲಪರ್ಸ್ ಸಂಸ್ಥೆಯ ಇನ್‌ಲ್ಯಾಂಡ್ ವಿಂಡ್‌ಸರ್ಸ್ ನ್ನು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಸಿಲಿಕಾನ್ ಇಂಡಿಯಾ 2015ನೇ ವರ್ಷದ ಅತ್ಯುತ್ತಮ ಲಕ್ಷುರಿ ಅಪಾರ್ಟ್‌ಮೆಂಟ್ ಯೋಜನೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಸಿಲಿಕಾನ್ ಇಂಡಿಯಾ ಸಂಸ್ಥೆ ಎಲ್‌ ಆಂಡ್ ಟಿ ಫೈನಾನ್ಸ್ ಸಂಸ್ಥೆ ಸಹಯೋಗದಲ್ಲಿ ಇತ್ತೀಚೆಗೆ ಪ್ರತಿಷ್ಠಿತ ಸಿಲಿಕಾನ್ ಇಂಡಿಯಾ ರಿಯಲ್ ಎಸ್ಟೇಟ್ ಪ್ರಶಸ್ತಿ 2015 ನ್ನು ಪ್ರಕಟಿಸಿದೆ.

ಈ ವರ್ಷದ ಸಿಲಿಕಾನ್ ಇಂಡಿಯಾ ಪ್ರಶಸ್ತಿಗೆ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಿಂದ ಒಟ್ಟು 140 ನಾಮ ನಿರ್ದೇಶನಗಳು ಬಂದಿದ್ದು, ಪರಿಣತ ತೀರ್ಪುಗಾರರ ಮಂಡಳಿ ಅವಿರೋಧವಾಗಿ ಇನ್‌ಲ್ಯಾಂಡ್ ವಿಂಡ್‌ಸರ್ಸ್ ಕಟ್ಟಡವನ್ನು ಪ್ರಶಸ್ತಿಗೆ ಅಯ್ಕೆ ಮಾಡಿದೆ.

Inland_windsor_2

 

ಸಿಲಿಕಾನ್ ಇಂಡಿಯಾ 6 ದಶಲಕ್ಷ ನೆಟ್ ವರ್ಕ್ ಸದಸ್ಯರನ್ನು ಹೊಂದಿದ್ದು, ಅಮೇರಿಕ, ಭಾರತ ಮತ್ತು ಇತರ ಪಾಶ್ಚಿಮಾತ್ಯ ಹಾಗೂ ಏಶಿಯಾದ ದೇಶಗಳ ಆರ್ಥಿಕ, ತಾಂತ್ರಿಕ ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂಡಿದೆ. ಕ್ಯಾಲಿಪೋರ್ನಿಯಾದ ಫ್ರೀಮೊಂಟ್ ನಿಂದ ಪ್ರಕಟವಾಗುವ ಮ್ಯಾಗಸಿನನ್ನು ಕೂಡ ಅದು ನಡೆಸುತ್ತಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ, ಗುಣಮಟ್ಟ, ವಿಶ್ವಾಸಾರ್ಹತೆ, ತಾಂತ್ರಿಕತೆ ಮತ್ತು ನಿರಂತರ ಸುಧಾರಣೆ ತರುವ ಉದ್ಯಮಿಗಳನ್ನು ಗುರುತಿಸಿ ಗೌರವಿಸುವುದಕ್ಕಾಗಿ ಸಿಲಿಕಾನ್ ಇಂಡಿಯಾ ಪ್ರಶಸ್ತಿ ಸ್ಥಾಪಿಸಲಾಗಿದೆ.

ಇನ್‌ಲ್ಯಾಂಡ್ ವಿಂಡ್‌ಸರ್ಸ್ ಯೋಜನೆಗೆ ಸಿಲಿಕಾನ್ ಇಂಡಿಯಾ ಪ್ರಶಸ್ತಿಯನ್ನು ಜು.10 ರಂದು ಬೆಂಗಳೂರಿನ ಲಲಿತ್ ಹೊಟೇಲ್ ನಲ್ಲಿ ಜರಗುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

ಇನ್‌ಲ್ಯಾಂಡ್ ವಿಂಡ್‌ಸರ್ಸ್ ಕಟ್ಟಡಕ್ಕೆ ಈಗಾಗಲೇ ರಾಷ್ಟ್ರೀಯ ಸುರಕ್ಷತಾ ಪರಿಷತ್ ನಿಂದ ಸುರಕ್ಷಾ ಪುರಸ್ಕಾರ್ 2011 ಕಾಂಕ್ರೀಟ್ ಸ್ಟ್ರಕ್ಚರ್‌ಗಾಗಿ ಎಸಿಸಿಇ (ಐ) – ಅಲ್ಟ್ರಾಟೆಕ್ ಆವಾರ್ಡ್ 2014 ಕ್ರೇಡಾಯ್‌ನಿಂದ “ಬಿಲ್ಡರ್ ಪಾರ್ ಎಕ್ಸಲೆನ್ಸ್ ಆವಾರ್ಡ್ 2014, ಕ್ರೆಡಾಯ್ ಕರ್ನಾಟಕದಿಂದ “ಬೆಸ್ಟ್ ರೆಸಿಡೆನ್ಯಿಯಲ್ ಡ್ವೆಲಿಂಗ್ಸ್ – ಸೌತ್ ಕರ್ನಾಟಕ ಝೋನ್ ಪ್ರಶಸ್ತಿಗಳು ಬಂದಿದೆ.

ಈ ವಸತಿ ಕಟ್ಟಡದಲ್ಲಿ ಕ್ಲಬ್ ಹೌಸ್, ಅಗ್ನಿಸುರಕ್ಷೆ, ಭದ್ರತೆ, ವಿನ್ಯಾಸ, ನಿರ್ಮಾಣದ ಗುಣಮಟ್ಟ ಇತ್ಯಾದಿ ವಿಷಯಗಳಲ್ಲಿ ಹಲವಾರು ಅಂತಾರಾಷ್ಟ್ರೀಯ ಲಕ್ಷುರಿ ಫೀಚರ್‌ಗಳನ್ನು ಪರಿಚಯಿಸಲಾಗಿದೆ. ಹಾಗಾಗಿ ದಕ್ಷಿಣ ಭಾರತದಲ್ಲಿಯೇ ಇದೊಂದು ಆಪೂರ್ವ, ಆಕರ್ಷಕ ಕಟ್ಟಡವಾಗಿದೆ ಎಂದು ಇನ್‌ಲ್ಯಾಂಡ್ ಸಮೂಹ ಸಂಸ್ಥೆ ಅಧ್ಯಕ್ಷ ಮತ್ತು ಆಡಲಿತ ನಿರ್ದೇಶಕ ಸಿರಾಜ್ ಅಹಮದ್ ಅವರು ತಿಳಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಂಗಳೂರಿನ ಕಟ್ಟಡವೊಂದು ಒಂದರ ಮೇಲೆ ಒಂದರಂತೆ ಪ್ರಶಸ್ತಿಗಳ ಸರಮಾಲೆ ಪಡೆಯುತ್ತಿರವುದು ಮಂಗಳೂರಿನ ಜನತೆಯ ಹೆಮ್ಮೆಯ ಸಂಗತಿ ಎಂದಿದ್ದಾರೆ.

Write A Comment