ಕನ್ನಡ ವಾರ್ತೆಗಳು

50 ದಿನ ಪೂರೈಸಿ ಶತದಿನೋತ್ಸವದತ್ತ ಮುನ್ನುಗ್ಗುತ್ತಿರುವ ‘ಎಕ್ಕಸಕ’ ತುಳು ಚಿತ್ರ : ಜ್ಯೋತಿ ಚಿತ್ರಮಂದಿರದ ಪ್ರೇಕ್ಷಕರಿಗೆ ಬಹುಮಾನ ಗೆಲ್ಲುವ ಅವಕಾಶ

Pinterest LinkedIn Tumblr

Ekka_Saka_Press_1 (1)

ಮಂಗಳೂರು: ‘ಲಕುಮಿ ಸಿನಿ ಕ್ರಿಯೇಶನ್ಸ್’ರವರ ಲಾಂಛನದಡಿ ಬಿಡುಗಡೆಗೊಂಡ ‘ಎಕ್ಕ ಸಕ’ ತುಳು ಚಲನಚಿತ್ರ ಯಶಸ್ವಿ 50 ದಿನ ಪೂರೈಸಿ ಶತದಿನೋತ್ಸವದತ್ತ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆ ಮಾಡುವವರಿಗೆ ಲಕ್ಕಿ ಡ್ರಾ ಮೂಲಕ ಬಹುಮಾನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ಲಯನ್ ಲಯನ್ ಕಿಶೋರ್ ಡಿ ಶೆಟ್ಟಿ ತಿಳಿಸಿದ್ದಾರೆ.

ನಗರದಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವಾರ ಲಕ್ಕಿ ಡ್ರಾ ನಡೆಯಲಿದೆ. ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ‘ಮೊಬೈಲ್’ ಅನ್ನು ಬಹುಮಾನವನ್ನಾಗಿ ನೀಡಲಾಗುವುದು. 50ನೇ ದಿನದಿಂದ 100ನೇ ದಿನದ ತನಕ ಪ್ರದರ್ಶನದ ಟಿಕೆಟ್‍ನಲ್ಲಿ ಆಯ್ಕೆಯಾದ ವಿಜೇತರಿಗೆ 100ನೇ ದಿನದಂದು 3 ಬಂಪರ್ ಬಹುಮಾನ ನೀಡಲಾಗುವುದು. ಮೊದಲ ಬಹುಮಾನ 32 ಇಂಚು ಟಿವಿ, 2ನೇ ಬಹುಮಾನ 1ವಾಷಿಂಗ್‍ಮೆಶಿನ್, 3ನೇ ಬಹುಮಾನ 1 ರೆಫ್ರಿಜರೇಟರ್ ಹಾಗೂ 10 ಆಕರ್ಷಕ ಬಹುಮಾನವಿದೆ. ಜೂನ್ 28ರಂದು ಸಂಜೆ 6.15ಕ್ಕೆ ಮೊದಲ ಡ್ರಾ ನಡೆಯಲಿದೆ. ಆದರೆ ಈ ಎಲ್ಲಾ ಬಹುಮಾನಗಳನ್ನು ಗೆಲ್ಲುವ ಅವಕಾಶ ನಗರದ ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಣೆ ಮಾಡುವ ಪ್ರೇಕ್ಷಕರ ಸಿನಿಮಾದ ಟಿಕೆಟ್‍ನಲ್ಲಿ ಮಾತ್ರ ಎಂದು ತಿಳಿಸಿದ್ದಾರೆ.

Ekka_Saka_Press_1 (5) Ekka_Saka_Press_1 (6)

50 ದಿನಗಳಲ್ಲಿ 1.39ಕೋಟಿ ರೂಪಾಯಿ ದಾಖಲೆ ಗಳಿಕೆ:

‘ಎಕ್ಕ ಸಕ’ ಕೇವಲ 50 ದಿನಗಳಲ್ಲಿ 1.39ಕೋಟಿ ರೂಪಾಯಿ ದಾಖಲೆ ಗಳಿಕೆ ಮಾಡಿದೆ. ಇದಕ್ಕೆ ಚಿತ್ರದ ಗುಣಮಟ್ಟ ಮಾತ್ರವಲ್ಲ, ಕಲಾಭಿಮಾನಿಗಳ ಪ್ರೋತ್ಸಾಹ ಶ್ರೀರಕ್ಷೆಯಾಗಿದೆ. ಮುಂದಿನ ದಿನಗಳಲ್ಲಿ ಮುಂಬೈ, ಬೆಂಗಳೂರು ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ‘ಎಕ್ಕ ಸಕ’ ಪ್ರದರ್ಶನಗೊಳ್ಳಲಿದೆ ಎಂದು ಕಿಶೋರ್ ಡಿ.ಶೆಟ್ಟಿ ತಿಳಿಸಿದರು.

Ekka_Saka_Press_1 (2) Ekka_Saka_Press_1 (3) Ekka_Saka_Press_1 (4)

ಮತ್ತೋರ್ವ ನಿರ್ಮಾಪಕ ಲಯನ್ ಚಂದ್ರಹಾಸ ಶೆಟ್ಟಿ ಮಾತನಾಡಿ, ‘ಎಕ್ಕ ಸಕ’ ಪ್ರತಿಯೊಬ್ಬರ ಮನೆ, ಮನಗಳಲ್ಲಿ ಪ್ರತಿಧ್ವನಿಸುತ್ತಿದೆ. ಆರು ಚಿತ್ರ ಮಂದಿರಗಳಲ್ಲಿ 50 ದಿನ ಪೂರೈಸಿ ಒಟ್ಟು 14 ಚಿತ್ರ ಮಂದಿರಗಳಲ್ಲಿ 1551 ನೇ ಪ್ರದರ್ಶನದ ಮೂಲಕ ದಾಖಲೆ ನಿರ್ಮಿಸಿದೆ. ಸದಭಿರುಚಿಯ ಸಂಭಾಷಣೆ, ಕುಟುಂಬ ಸಮೇತರಾಗಿ ನೋಡಲೇಬೇಕಾದ ಚಿತ್ರವಾಗಿದೆ. ಕಾಮಿಡಿ ಪಂಚ್ ಪ್ರತಿಯೊಬ್ಬನ ಕಲಾಭಿಮಾನಿಯ ಮನ ಮುಟ್ಟಿದೆ. ತುಳುರಂಗಭೂಮಿಯ ಕಲಾವಿದರ ಅಧ್ಬುತ ಅಭಿನಯ, ಸುಂದರ ಪ್ರೀತಿಯ ಕಥೆಯ ಸುತ್ತ ಹೆಣೆದ ಚಿತ್ರಕಥೆ ಹಲವು ಬಾರಿ ವೀಕ್ಷಿಸುವಂತೆ ಮಾಡುತ್ತಿದೆ ಎಂದರು.

ಥಿಯೇಟರ್ ಗಳಲ್ಲಿ ತುಳು ಸಿನೆಮಾ ಚೆನ್ನಾಗಿ ಓಡುತ್ತಿದೆ, ಜನರು ತುಳು ಸಿನೇಮಾವನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಓಳ್ಳೆಯ ಸಿನೆಮಾಕ್ಕೆ ತುಳು ಜನರು ಪ್ರೋತ್ಸಾಹಿಸುತ್ತಾರೆ ಎಂಬುದು ಎಕ್ಕಸಕ ಚಿತ್ರದಿಂದ ಬಯಲಾಗಿದೆ. ಎಕ್ಕಸಕ ಒಂದು ಉತ್ತಮ ಸಂದೇಶವುಳ್ಳ ಚಿತ್ರ ಎಂದು ಕಲಾವಿದ ಉಮಾನಾಥ ಕೋಟ್ಯಾನ್‍ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಗಿರೀಶ್ ಶೆಟ್ಟಿ, ನಿರ್ದೇಶಕ ಸೂರಜ್ ಶೆಟ್ಟಿ,ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಾರ್ಯಕಾರಿ ನಿರ್ಮಾಪಕ ಮೋಹನ್ ಕೊಪ್ಪಲ,ಉದ್ಯಮಿ ಪ್ರಕಾಶ್ ಪಾಂಡೇಶ್ವರ,ಕೃಷ್ನ ಸಾರಥಿ, ವಸಂತ ವಿ.ಅಮೀನ್, ಮಯೂರ್ ಶೆಟ್ಟಿ, ಮಂಜಾನೆ ಮಂಜು, ಸುಂದರ ರೈ ಮಂದಾರ, ಪ್ರದೀಪ್ ಆಳ್ವಾ ಕದ್ರಿ, ನಾಯಕಿ ನಟಿ ಸೊನಾಲ್ ಮೊಂತೆರೋ, ಲಯನ್ಸ್ ಪ್ರಾದೇಶಿಕ ಚೇರ್‍ಮೆನ್ ರತ್ನಾಕರ್ ದಂಪತಿ ಉಪಸ್ಥಿತರಿದ್ದರು.

Write A Comment