ಉಳ್ಳಾಲ ಜೂ, 21: ಇಸ್ಲಾಂನ ಬಗ್ಗೆ ಅರಿವು ಮೂಡಬೇಕಾದರೆ ಇಸ್ಲಾಂನ ಚೌಕಟ್ಟಿನೊಳಗಿರುವ ಸಂಘಟನೆಗಳ ಸದಸ್ಯತ್ವ ಅಗತ್ಯವಿದೆ. ಎಸ್‌ಕೆಎಸ್ಸೆಸ್ಸೆಫ್‌ನಂತಹ ಸುನ್ನಿ ಪಂಗಡದ ಸದಸ್ಯತ್ವ ಪಡಕೊಂಡಲ್ಲಿ ಸುನ್ನತ್ ಜಮಾಅತ್‌ನ ಆಶಯಗಳನ್ನು ತಿಳಿದುಕೊಳ್ಳಲು ಸಾಧ್ಯ.ಯಾವುದೇ ಪ್ರಯೋಜನಕ್ಕೂ ಬಾರದ ಸಂಘಟನೆಗಳ ಸದಸ್ಯತ್ವ ಪಡೆಯುವುದಕ್ಕಿಂತ ಉತ್ತಮವಾದುದು ಎಸ್‌ಕೆಎಸ್ಸೆಸ್ಸೆಫ್‌ನ ಸದಸ್ಯತ್ವ ಆಗಿದೆ ಎಂದು ಫಾರೂಕ್ ದಾರಿಮಿ ಹೇಳಿದರು.
ಅವರು ಎಸ್‌ಕೆಎಸ್ಸೆಸ್ಸೆಫ್ ದೇರಳಕಟ್ಟೆ ಇದರ ಆಶ್ರಯದಲ್ಲಿ ದೇರಳಕಟ್ಟೆಯ ಎಸ್‌ಕೆಎಸ್ಸೆಸ್ಸೆಫ್‌ನ ಕಚೇರಿಯಲ್ಲಿ ನಡೆದ ಎಸ್‌ಕೆ ಎಸ್‌ಕೆಎಸ್ಸೆಸ್ಸೆಫ್‌ನ ಸದಸ್ಯತ್ವ ಅಭಿಯಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್‌ಕೆಎಸ್ಸೆಸ್ಸೆಫ್‌ನ ದೇರಳಕಟ್ಟೆಯ ಅಧ್ಯಕ್ಷ ಅಝ್ಮಾಲ್ ಶಾಫಿ ವಹಿಸಿದ್ದರು. ಅಮೀರ್ ತಂಙಳ್ ದುವಾ ನೆರವೇರಿಸಿದರು. ದೇರಳಕಟ್ಟೆ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಎಂ. ಶರೀಫ್ ದಾರಿಮಿ ವಿಷಯ ಪ್ರಸ್ತಾಪ ಮಾಡಿದರು. ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಡಿ.ಉಪಸ್ಥಿತರಿದ್ದರು. ಎಸ್‌ಕೆಎಸ್ಸೆಸ್ಸೆಫ್‌ನ ಕಾರ್ಯದರ್ಶಿ ನೌಶಾದ್ ಸ್ವಾಗತಿಸಿದರು.
ಕ್ಯಾಪ್ಶನ್: ಎಸ್‌ಕೆ ಎಸ್‌ಎಫ್ ದೇರಳಕಟ್ಟೆ ಇದರ ಆಶ್ರಯದಲ್ಲಿ ದೇರಳಕಟ್ಟೆಯ ಎಸ್‌ಕೆಎಸ್‌ಎಸ್‌ಎಫ್‌ನ ಕಚೇರಿಯಲ್ಲಿ ನಡೆದ ಎಸ್‌ಕೆ ಎಸ್‌ಎಸ್‌ಎಫ್‌ನ ಸದಸ್ಯತ್ವ ಅಭಿಯಾನದ ಕಾರ್ಯಕ್ರಮ ನಡೆಯಿತು.
