ಕನ್ನಡ ವಾರ್ತೆಗಳು

ಪ್ರಾಕೃತಿಕ ವಿಕೋಪದ ನೆರವಿಗೆ ವಿಶೇಷ ನಿಧಿ : ಶ್ರೀ ಚಂದ್ರಶೇಖರ ಸ್ವಾಮೀಜಿ

Pinterest LinkedIn Tumblr

Mulki_Swamiji_Visit

ಮೂಲ್ಕಿ:ನೆಲ-ಜಲ ಸಂರಕ್ಷಿಸುವ ನಮಗೆ ಪ್ರಾಕೃತಿಕ ವಿಕೋಪ ಸಹಜ ಪ್ರಕ್ರಿಯೆ. ಇಂತಹ ದುರ್ಘಟನೆಗಳ ಪರಿಸ್ಥಿತಿಯನ್ನು ಜನಸಾಮಾನ್ಯರು ನಿರ್ಭೀತಿಯಿಂದ ಎದುರಿಸುವಂತಾಗಲು ಮನೋಧೈರ್ಯವನ್ನು ನೀಡುವ ಉದ್ದೇಶದಿಂದಲೇ ಆಶ್ರಮದ ಸೇವಾರ್ಥಿಗಳು ಪ್ರಕೃತಿ ವಿಕೋಪದ ಸಂತ್ರಸ್ತರಿಗಾಗಿ ಸಹಾಯ ನಿಧಿಯನ್ನು ಸ್ಥಾಪಿಸಲಾಗಿದೆ. ಸರಕಾರವು ಶೀಘ್ರವಾಗಿ ಇಂತಹ ಪ್ರಕೃತಿ ವಿಕೋಪಕ್ಕೆ ಸ್ಪಂದಿಸಬೇಕು ಎಂದು ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞರು, ವೈಜ್ಞಾನಿಕ ಜ್ಯೋತಿಷಿಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಹೇಳಿದರು.

ಅವರು ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆಕಾಡುವಿನಲ್ಲಿ ಸುಂಟರ ಗಾಳಿಗೆ ಸಿಲುಕಿ ಹಾನಿಗೊಂಡ ಮನೆಗಳಿಗೆ ಶನಿವಾರ ಭೇಟಿ ನೀಡಿ ಸಾಂತ್ವಾನ ನೀಡಿದರು.

ಈ ಸಂದರ್ಭದಲ್ಲಿ ಆಶ್ರಮದ ವತಿಯಿಂದ ತಾತ್ಕಾಲಿಕ ನೆಲೆಯಲ್ಲಿ ೩೮ ಮಂದಿ ಸಂತ್ರಸ್ತರ ಪ್ರತಿಯೊಂದು ಮನೆಗೂ ಅಕ್ಕಿ, ಪ್ಲಾಸ್ಟಿಕ್ ಶೀಟ್, ಕೊಡೆ, ಬಟ್ಟೆ, ಸೀರೆ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಿತರಿಸಿ ಮುಂದಿನ ದಿನದಲ್ಲಿ ಇನ್ನಷ್ಟು ಸಹಕಾರವನ್ನು ಕೆರೆಕಾಡಿನ ಪ್ರದೇಶಕ್ಕೆ ನೀಡುವೆ ಎಂದು ತಿಳಿಸಿದರು.

ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಮಧು ಆಚಾರ್ಯ ಕಾರ್ನಾಡು, ಕೃಷ್ಣ ಹೆಬ್ಬಾರ್, ವೆಂಕಟೇಶ್, ಸಾದಿಕ್, ಕಿಲ್ಪಾಡಿ ಗ್ರಾಮ ಪಂಚಾಯತ್‌ನ ಸದಸ್ಯರಾದ ಶ್ರೀಕಾಂತ್, ಸುನಿತಾ ಆಚಾರ್ಯ, ದಮಯಂತಿ ಶೆಟ್ಟಿಗಾರ್, ನಾಗರಾಜ ಕುಲಾಲ್, ಯಶೋಧಾ, ಶಾಂತಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪತ್ರಕರ್ತ ನರೇಂದ್ರ ಕೆರೆಕಾಡು ನಿರೂಪಿಸಿದರು.

Write A Comment