ಕನ್ನಡ ವಾರ್ತೆಗಳು

ಸಿಸಿಬಿ ಪೊಲೀಸ ಕಾರ್ಯಚರಣೆ : ಕೊಲೆ, ದರೋಡೆಗೆ ಸಂಚು ನಡೆಸುತ್ತಿದ್ದ 10 ಮಂದಿಯ ಸೆರೆ : ನಕಲಿ ಪಿಸ್ತೂಲ್ ಸಹಿತಾ ಐದು ತಲವಾರು, 16 ಮೊಬೈಲ್ ಫೋನ್‌ಗಳ ವಶ

Pinterest LinkedIn Tumblr

Robory_Skach_10arest_1

ಮಂಗಳೂರು, ಜೂ.18: ಜೋಕಟ್ಟೆ ಇಂಡಸ್ಟ್ರಿಯಲ್ ಏರಿಯಾ ಬಳಿಯಲ್ಲಿ ಇಲ್ಯಾಸ್ ಎಂಬಾತನ ಕೊಲೆ ಹಾಗೂ ದರೋಡೆಗೆ ಸಂಚು ರೂಪಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಮಂದಿಯನ್ನು ಬುಧವಾರ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕೃಷ್ಣಾಪುರ 6ನೆ ಬ್ಲಾಕ್‌ನ ಸಾಹಿಲ್ ಇಸ್ಮಾಯೀಲ್ (20), ಹಳೆಯಂಗಡಿ ಕೊಪ್ಪಳ ಮನೆ ನಿವಾಸಿ ಮುಹಮ್ಮದ್ ಸುಝಾನ್ ಸುಜ್ಜ(18), ಹಳೆಯಂಗಡಿ ಪಡುಪಣಂಬೂರು ಅರಸುಕಂಬ್ಳದ ಬಳಿ ನಿವಾಸಿ ಮುಹಮ್ಮದ್ ಅನೀಸ್ (18), ಹಳೆಯಂಗಡಿ ಬದ್ರಿಯಾ ಜುಮಾ ಮಸೀದಿ ಬಳಿಯ ನಿವಾಸಿ ಮುಹಮ್ಮದ್ ಅಕ್ಬರ್ ಸವಾದ್ (17), ಹಳೆಯಂಗಡಿ ಗೋಳಿದಡಿ ಮನೆ ಮೀನು ಮಾರ್ಕೆಟ್ ಬಳಿ ನಿವಾಸಿ ಅಬ್ದುಲ್ ರವೂಫ್ (20), ಉಡುಪಿ ಜಿಲ್ಲೆ ಹೆಜಮಾಡಿಯ ಕೊಂಬಟ್ಟು ನಿವಾಸಿ ಮುಹಮ್ಮದ್ ಶಫೀಕ್ (17), ಕುತ್ತಾರು ಬಗಂಬಿಲ ರಸ್ತೆಯ ಮುಹಮ್ಮದ್ ಸುಹೈಲ್ (20), ಬೆಂಗಳೂರು ತ್ಯಾಗರಾಜನಗರದ ಒಂದನೆ ಮುಖ್ಯ ರಸ್ತೆ ರಾಮಕೃಷ್ಣ ಬ್ಲಾಕ್‌ನ ಮಹೇಂದ್ರ (35), ಬೆಂಗಳೂರು ಬಸವನಗುಡಿ ಟಿ.ಆರ್.ನಗರ 2ನೆ ಬ್ಲಾಕ್‌ನ ಕೆ.ಎಸ್. ಕಾಲನಿಯ ಶ್ರೀ ನಿವಾಸ (40), ಬೆಂಗಳೂರು ಬನಶಂಕರಿ 9ನೆ ಸ್ಟೇಜ್ ಕಾವೇರಿ ನಗರದ ಶರವಣ (36) ಎಂದು ಗುರುತಿಸಲಾಗಿದೆ.

Robory_Skach_10arest_2

Robory_Skach_10arest_3

ಬೈಕಂಪಾಡಿ ಬಳಿಯ ಫ್ಯಾಕ್ಟರಿವೊಂದರ ಬಳಿಯಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ತಿರುಗಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ನಗರದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು ಮಂಗಳೂರಿನ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಹಳೆಯಂಗಡಿಯ ಸಫ್ವಾನ್ ಎಂಬಾತನ ಸಂಚಿನಂತೆ ಉಳ್ಳಾಲದ ಇಲ್ಯಾಸ್ ಎಂಬಾತನ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಯಾಸ್ ಇತ್ತೀಚೆಗೆ ಗೂಂಡಾ ಕಾಯ್ದೆಯಲ್ಲಿ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಆತನ ಕೊಲೆಗೆ ಹಾಗೂ ಶ್ರೀಮಂತ ವ್ಯಕ್ತಿಗಳನ್ನು ದರೋಡೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರೆಂದು ಹೇಳಲಾಗಿದ್ದು, ಕೃತ್ಯಕ್ಕಾಗಿ ಕೆಎ-19- ಬಿ-5034 ಸಂಖ್ಯೆಯ ಸ್ಕಾರ್ಪಿಯೋ ಕಾರನ್ನು ಬಾಡಿಗೆಗೆ ಪಡೆದುಕೊಂಡು ಆ ಕಾರಿಗೆ ಕೆಎ-20-ಎಂಸಿ-9537 ಸಂಖ್ಯೆಯ ನಕಲಿ ನಂಬರ್ ಪ್ಲೇಟ್ ಅಳವಡಿಸಿ ತಿರುಗಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿತರುಗಳಿಂದ ಒಂದು ಸ್ಕಾರ್ಪಿಯೋ ಕಾರು, 5 ತಲವಾರು, ಒಂದು ನಕಲಿ ಪಿಸ್ತೂಲ್, 16 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಸುಝಾನ್ ಮುಹಮ್ಮದ್ ನ್ಯಾಯಾಂಗ ಬಂಧನದಲ್ಲಿರುವ ಸಫ್ವಾನ್‌ನ ಕಿರಿಯ ಸಹೋದರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಹಾಗೂ ವಶಪಡಿಸಿಕೊಳ್ಳಲಾದ ಸೊತ್ತನ್ನು ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ ಪೈಕಿ ಮಹೇಂದ್ರ ಎಂಬಾತನ ವಿರುದ್ಧ ಬೆಂಗಳೂರು ಜೆ.ಪಿ. ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಇನ್ನೋರ್ವ ಆರೋಪಿ ಸಾಹಿಲ್ ಇಸ್ಮಾಯೀಲ್ ಎಂಬಾತನ ವಿರುದ್ಧ 2014ರಲ್ಲಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಹಾಸನ ಜಿಲ್ಲೆಯ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣವು ದಾಖಲಾಗಿದೆ.

ನಗರ ಪೊಲೀಸ್ ಕಮಿಶನರ್ ಎಸ್.ಮುರುಗನ್‌ರ ಆದೇಶದಂತೆ ಡಿಸಿಪಿಗಳಾದ ಕೆ.ಎಂ. ಶಾಂತರಾಜು, ವಿಷ್ಣುವರ್ಧನ್ ಎನ್.ರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸ್‌ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬಂಧಿತರ ಸಂಪೂರ್ಣ ವಿವರ :

Robory_Skach_10arest_4

  1. ಶಾಹಿಲ್ ಇಸ್ಮಾಯಿಲ್ @ ಸಾಹಿಲ್(20), ತಂದೆ: ಅಶ್ರಫ್, ವಾಸ: ತೊಯಿಬಾ ಮಸೀದಿ ಹಿಂಭಾಗ(ಬಾಡಿಗೆ ಮನೆ), 6 ನೇ ಬ್ಲಾಕ್, ಕೃಷ್ಣಾಪುರ, ಮಂಗಳೂರು.
  2. ಸುಝಾನ್ @ ಮೊಹಮ್ಮದ್ ಸುಝಾನ್ @ ಸುಜ್ಜ(18), ತಂದೆ: ಹಮ್ಮಬ್ಬ, ವಾಸ: ಕೊಪ್ಪಳ ಮನೆ, ಹಳೆಯಂಗಡಿ ಹಳೆಯಂಗಡಿ, ಮಂಗಳೂರು.
  3. ಮೊಹಮ್ಮದ್ ಅನೀಝ್ @ ಅನೀಝ್, ಪ್ರಾಯ(18), ತಂದೆ: ಅಬೂಬಕ್ಕರ್, ವಾಸ: ಐಮನ್ ವಿಲ್ಲಾ, ಅರಸು ಕಂಬ್ಳದ ಬಳಿ, ಪಡುಪಣಂಬೂರು, ಹಳೆಯಂಗಡಿ, ಮಂಗಳೂರು.
  4. ಅಬ್ದುಲ್ ರವೂಫ್ @ ರವೂಫ್(20), ತಂದೆ: ಕೆ. ಮಯ್ಯದಿ, ವಾಸ: ಗೋಳಿದಡಿ ಮನೆ, ಹಳೆಯಂಗಡಿ, ಮೀನು ಮಾರ್ಕೆಟ್ ಬಳಿ, ಹಳೆಯಂಗಡಿ ಗ್ರಾಮ, ಮಂಗಳೂರು.
  5. ಮೊಹಮ್ಮದ್ ಸುಹೈಲ್ @ ಸುಹೈಲ್, ಪ್ರಾಯ(20), ತಂದೆ: ಅಬ್ದುಲ್ ಖಾದರ್, ವಾಸ: ಪರ್ವೆಸ್ ಕಂಪೌಂಡ್, ಉಸ್ಮಾನ್ ಎಂಬವರ ಬಾಡಿಗೆ ಮನೆ, ಬಗಂಬಿಲ ರಸ್ತೆ, ಯೇನೆಪೋಯ ಆಸ್ಪತ್ರೆ ಹಿಂಬದಿ, ಕುತ್ತಾರು, ಮಂಗಳೂರು.
  6. ಮಹೇಂದ್ರ, ಪ್ರಾಯ(35), ತಂದೆ: ಲಕ್ಷ್ನಣ ಮೂರ್ತಿ ವಾಸ: ನಂಬ್ರ: 115, 1 ನೇ ಮೈನ್ ರಸ್ತೆ, ರಾಮಕೃಷ್ಣ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು.
  7. ಶ್ರೀನಿವಾಸ, ಪ್ರಾಯ(40), ತಂದೆ: ದಿ: ಮೂದಲಪ್ಪ, ವಾಸ: ನಂಬ್ರ: 115., 1 ನೇ ಮೈನ್ ರಸ್ತೆ, ಕೆ.ಎಸ್ ಕಾಲೋನಿ, ಟಿ.ಆರ್ ನಗರ, 2 ನೇ ಬ್ಲಾಕ್, ಬಸವನಗುಡಿ, ಬೆಂಗಳೂರು.
  8. ಶರವಣ, ಪ್ರಾಯ(36), ತಂದೆ: ಸೆಲ್ವರಾಜ್, ವಾಸ: ಇ-496, 4 ನೇ ಅಡ್ಡ ರಸ್ತೆ, ಕನಕಪುರ ಮುಖ್ಯ ರಸ್ತೆ, ಹುಣಸೆಮರದ ಹತ್ತಿರ, ಕಾವೇರಿ ನಗರ, ಬನಶಂಕರಿ 9 ನೇ ಸ್ಟೇಜ್, ಬೆಂಗಳೂರು.
  9. ಹಳೆಯಂಗಡಿ ಬದ್ರಿಯಾ ಜುಮಾ ಮಸೀದಿ ಬಳಿಯ ನಿವಾಸಿ ಮುಹಮ್ಮದ್ ಅಕ್ಬರ್ ಸವಾದ್ (17),
  10. ಉಡುಪಿ ಜಿಲ್ಲೆ ಹೆಜಮಾಡಿಯ ಕೊಂಬಟ್ಟು ನಿವಾಸಿ ಮುಹಮ್ಮದ್ ಶಫೀಕ್ (17),

Write A Comment