ಕನ್ನಡ ವಾರ್ತೆಗಳು

ಮಂಗಳೂರು : ಸಮುದ್ರ ತೀರದಲ್ಲಿ ಗಾಯಗೊಂಡ ಡಾಲ್ಫಿನ್‌ ಪತ್ತೆ

Pinterest LinkedIn Tumblr

Dolphin_fish_Find_1

ಮಂಗಳೂರು / ಸುರತ್ಕಲ್: ಡಾಲ್ಫಿನ್‌ ಫಿಶ್ ಒಂದು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಬುಧವಾರ ಬೆಳಿಗ್ಗೆ ಹೊಸಬೆಟ್ಟುವಿನ ಕಡಲ ತೀರದಲ್ಲಿ ಪತ್ತೆಯಾಗಿದೆ. ಗಾಯಗೊಂಡಿದ್ದ ಡಾಲ್ಫಿನ್ ಮೀನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕಾಗಮಿಸಿ ಮೊಬೈಲ್‌ನಲ್ಲಿ ಫೊಟೋ ತೆಗೆಯುತ್ತಿರುವ ದೃಶ್ಯ ಕಂಡು ಬಂದಿತ್ತು.

Dolphin_fish_Find_2 Dolphin_fish_Find_3

ಬುಧವಾರ ಮುಂಜಾನೆ ಕಡಲ ತೀರದಲ್ಲಿ ಕಾಣಿಸಿಕೊಂಡ ಸುಮಾರು 4 ಅಡಿ ಉದ್ದದ ಡಾಲ್ಫಿನ್‌ ದೇಹದಲ್ಲಿ ಗಾಯದ ಗುರುತುಗಳಿದ್ದು, ಸ್ಥಳಿಯರು ಪ್ರಥಮ ಚಿಕಿತ್ಸೆ ನೀಡಿ ಚಿಕಿತ್ಸೆ ಬಳಿಕ ಡಾಲ್ಫಿನನ್ನು ಮತ್ತೆ ಸಮುದ್ರಕ್ಕೆ ಬಿಟ್ಟಿದ್ದಾರೆ. ಡಾಲ್ಫಿನ್‌ಗೆ ಚಿಕಿತ್ಸೆ ನೀಡಲಾಗಿದ್ದರೂ ಅದು ಬದುಕುಳಿಯುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗಿದೆ.

Dolphin_fish_Find_4 Dolphin_fish_Find_5

ಹಡಗುಗಳ ಬ್ಲೇಡ್‌ ತಗುಲಿ ಅಥಾವ ಯಾಂತ್ರಿಕ ದೋಣಿ ತಗುಲಿ ಅದು ಗಾಯಗೊಂಡು ಸಮುದ್ರ ದಂಡೆಗೆ ಬಂದು ಬಿದ್ದಿರಬೇಕು ಎಂದು ಅಂದಾಜಿಸಲಾಗಿದೆ. ಮೀನುಗಾರರ ಪ್ರಕಾರ ಡಾಲ್ಫಿನ್ ದೇಹ ಕೆಂಪು ಬಣ್ಣಕ್ಕೆ ತಿರುಗಿದೆ. ಗಾಯದ ಜೊತೆಗೆ ಅದು ಕೈಗಾರಿಕೆ ತ್ಯಾಜ್ಯವನ್ನು ತಿಂದು ಅಥವಾ ಆ ನೀರಿನ ಕಾರಣಕ್ಕೆ ಅದು ಈ ಸ್ಥಿತಿಗೆ ಬಂದಿರುವ ಸಂಭವ ಇದೆ ಎನ್ನಲಾಗಿದೆ. ಕೆಲವು ಸಮಯಗಳ ಹಿಂದೆ ಪಣಂಬೂರು ಬೀಚ್‌ನಲ್ಲಿ ಡಾಲ್ಫಿನ್‌ಗಳು ಹಾರುತ್ತಿದ್ದುದು ಕಂಡು ಬಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

Write A Comment