ಕನ್ನಡ ವಾರ್ತೆಗಳು

ಇಂಟರ್ನೆಟ್ ಬ್ಯಾಂಕಿಂಗ್: 40.84 ಲ.ರೂ. ಗುಳುಂ ಸ್ವಾಹ..!

Pinterest LinkedIn Tumblr

Fraud_case_ullala

ಉಡುಪಿ: ವಿದೇಶದಲ್ಲಿರುವ ಮಹಿಳೆಯೊಬ್ಬರ ಐಸಿ‌ಐಸಿ‌ಐ ಬ್ಯಾಂಕಿನ ಮಣಿಪಾಲ ಶಾಖೆಯಲ್ಲಿದ್ದ ಖಾತೆಯಿಂದ ಇಂಟರ್ನೆಟ್(ಅಂತರ್ಜಾಲ) ಬ್ಯಾಂಕಿಂಗ್ ಮೂಲಕ ಯಾರೋ ದುಷ್ಕರ್ಮಿಗಳು ಹಂತ-ಹಂತವಾಗಿ 40,84,200 ನಗದೀಕರಿಸಕೊಂಡು ವಂಚನೆ ನಡೆಸಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಬುಧಾಬಿಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಆರ್ತಿ ಪೂಜಾರಿ ದೂರು ನೀಡಿದವರು. ತಾನು ಐಸಿ‌ಐಸಿ‌ಐ ಬ್ಯಾಂಕಿನ ಮಣಿಪಾಲ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು, 2015ರ ಎ. 3- 21 ವರೆಗೆ ಯಾರೋ ದುಷ್ಕರ್ಮಿಗಳು ಇಂಟರ್‌ನೆಟ್ ಬ್ಯಾಂಕಿಂಗ್ ತಂತ್ರeನವನ್ನು ದುರ್ಬಳಕೆ ಮಾಡಿಕೊಂಡುು ನಲವತ್ತು ಲಕ್ಷಕ್ಕೂ ಅಧಿಕ  ಹಣವನ್ನು ನಗದೀಕರಣ ಮತ್ತು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ಆರ್ತಿ ಪೂಜಾರಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

Write A Comment