ಕನ್ನಡ ವಾರ್ತೆಗಳು

ಹೋರಿಗಳ ಕಾದಾಟ: ಮೀನುಗಾರ ಮಹಿಳೆ ಬಲಿ

Pinterest LinkedIn Tumblr

Bull_fight_lady_dead

ಮಂಗಳೂರು, ಜೂನ್.11: ಹೋರಿ ಹೋರಿಗಳ ನಡುವೆ ನಡೆದ ಕಾದಾಟದಿಂದ ಹೋರಿಯೊಂದು ಮೈಮೇಲೆ ನುಗ್ಗಿ ಬಂದು ಕೊಂಬಿನಿಂದ ತಿವಿದ ಪರಿಣಾಮ ಮೀನುಗಾರ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ನಗರದ ಬೈಕಂಪಾಡಿಯಲ್ಲಿ ನಡೆದಿದೆ. ಮೃತ ಮಹಿಳೆ ಬೈಕಂಪಾಡಿ ಮೀನಕಳಿಯ ನಿವಾಸಿ ರೇವತಿ (58) ಎಂದು ಗುರುತಿಸಲಾಗಿದ್ದು, ಅವರು ಉರ್ವದ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ವೃತ್ತಿಯಲ್ಲಿದ್ದರು.

ನಿನ್ನೆ ಸಂಜೆ ಎಂದಿನಂತೆ ಮೀನು ಮಾರಾಟ ಮುಗಿಸಿಕೊಂಡು ರೇವತಿ ತನ್ನ ಮನೆಗೆ ಮರಳುತ್ತಿದ್ದರು. 6.30ರ ಸುಮಾರಿಗೆ ಮನೆಯ ಸಮೀಪ ತಲುಪಿದಾಗ ಎರಡು ಹೋರಿಗಳು ಕಾದಾಡುತ್ತಿದವು. ಬದಿಯಿಂದ ಸರಿದು ಹೋದ ರೇವತಿ ತನ್ನ ಮನೆಯೊಳಗೆ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಒಂದು ಹೋರಿ ಒಮ್ಮೆಲೇ ಆಕೆಯ ಮೇಲೆ ಎರಗಿ ತನ್ನ ಕೊಂಬಿನಿಂದ ಹೊಟ್ಟೆಗೆ ಇರಿದಿತ್ತು. ಕುಸಿದು ಬಿದ್ದ ರೇವತಿಯವರ ತಲೆಗೂ ಏಟು ಬಿದ್ದಿತ್ತು. ವಿಪರೀತ ರಕ್ತಸ್ರಾವಕ್ಕೊಳಗಾಗಿದ್ದ ಆಕೆಯನ್ನು ಸ್ಥಳೀಯರು ಮತ್ತು ಆಟೋಚಾಲಕರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರಾದರೂ ಬದುಕುಳಿಯಲಿಲ್ಲ.

ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment