ಕನ್ನಡ ವಾರ್ತೆಗಳು

ಶಾಸಕರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

Pinterest LinkedIn Tumblr

jr_lobo_photo

ಮಂಗಳೂರು,ಜೂನ್.11 : ಶಾಸಕ ಜೆ. ಆರ್. ಲೋಬೊರವರ ಅಧ್ಯಕ್ಷತೆಯಲ್ಲಿ ಬಲ್ಮಠ ಪದವಿಪೂರ್ವ ಮಹಿಳಾ ಕಾಲೇಜ್‌ನ ಆಭಿವೃದ್ಧಿ ಸಮಿತಿಯು ಪ್ರಗತಿ ಪರಿಶೀಲನಾ ಸಭೆ ಗುರುವಾರ ನಡೆಸಿತು. ಕಳೆದ ಸಾಲಿನ ಪದವಿಪೂರ್ವ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಿ, ಮುಂದಿನ ವರ್ಷ ಇನ್ನಷ್ಟು ಉತ್ತಮ ಫಲಿತಾಂಶವನ್ನು ಪಡೆಯಲು ಮಾರ್ಗಸೂಚಿಗಳನ್ನು ರಚಿಸಿ, ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳಲು ಪ್ರಾಂಶುಪಾಲರಿಗೆ ಸೂಚನೆ ನೀಡಿದರು.

ವರ್ಷಕ್ಕೆ ಎರಡು ಸಲ ಕಡ್ಡ್ಡಾಯವಾಗಿ ಪೋಷಕರ ಮತ್ತು ಶಿಕ್ಷಕರ ಸಂವಾದ ಸಭೆಯನ್ನು ಮಾಡಲು ಮತ್ತು ಕಾಲೇಜು ಅವರಣದಲ್ಲಿ ತಿಂಗಳಿಗೊಮ್ಮೆ ಸ್ವಚ್ಚತಾ ಅಂದೋಲನ ತಪ್ಪದೆ ನಡೆಸಲು ಸೂಚನೆ ನೀಡಿದರು. ಈ ಸಂದರ್ಭದಲ್ಲಿ, ಶೌಚಲಯದ ಕಟ್ಟಡ ಕಟ್ಟಲು ಶಾಸಕರ ನಿಧಿಯಿಂದ 2.00 ಲಕ್ಷ ರೂಪಾಯಿ ನೀಡುವುದಾಗಿ ತೀಳಿಸಿದರು.

ಇದಲ್ಲದೆ, ಪ್ರತಿ ವರ್ಷ ಸುಮಾರು ರೂಪಾಯಿ 4 ಲಕ್ಷ ಮೊತ್ತ ಜಾಹಿರಾತು ಫಲಕಗಳಿಂದ ಹಾಗು ಸುಮಾರು 5 ಲಕ್ಷ ಮೊತ್ತವನ್ನು ವಿದ್ಯಾರ್ಥಿಗಳಿಂದ 900 ರೂಪಾಯಿಯಂತೆ ಸಂಗ್ರಹಿಸಿ, ಈ ಮೊತ್ತದಿಂದ ಕಾಲೇಜಿನ ವೆಚ್ಚವನ್ನು ನಿರ್ವಹಿಸಲು ಹಾಗು ಗೌರವ ಉಪನ್ಯಾಸಕರಿಗೆ ತಿಂಗಳ ಗೌರವ ಧನ ನೀಡುವುಕ್ಕೆ ಉಪಯೋಗಿಸುವುದಾಗಿ, ಪ್ರಾಂಶುಪಾಲರು ಸಭೆಯಲ್ಲಿ ತೀಳಿಸಿದರು. ಇದಕ್ಕೆ ಸಂಭದಪಟ್ಟ ಖರ್ಚು ವೆಚ್ಚಗಳ ಸಂಕ್ಷಿಪ್ತ ಬಜೆಟ್‌ನ್ನು ತಯಾರಿಸಲು ಶಾಸಕರು ಸೂಚಿಸಿದರು.

ಸುತ್ತಮುತ್ತಲಿನಲ್ಲಿ ಬಸ್ಸ್‌ಗಳ ಹಾರ್ನ್‌ಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗು ಪಾಠ ಮಾಡಲು ಶಿಕ್ಷಕರಿಗೆ ತೊಂದರೆಯಾಗುವುದಾಗಿ, ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು, ಸಭೆಯಲ್ಲಿ ಪ್ರಾಂಶುಪಾಲರು ಕೋರಿದರು. ಶಾಸಕರು ಸೂಕ್ತ ಕ್ರಮಕೈಗೂಳ್ಳುವ ಭರವಸೆ ನೀಡಿದರು.ಈ ಸಭೆಯಲ್ಲಿ ಆಭಿವೃದ್ಧಿ ಸಮಿತಿಯ ಸದಸ್ಯರಾದ ತೇಜೋಮಯ, ಕಾರ್ಪೋರೇಟರ್ ವಿನಯ ರಾಜ್, ಪ್ರೆಮ್‌ಚಂದ್, ಪ್ರಾಂಶುಪಾಲರಾದ ಜೋಸೆಫ್ ಮತ್ತಿತ್ತರು ಉಪಸ್ಥಿತರಿದ್ದರು.

Write A Comment