ಕನ್ನಡ ವಾರ್ತೆಗಳು

ಡಿ.ವೈ.ಎಫ್.ಐ ವತಿಯಿಂದ ರಸ್ತೆ ತಡೆ ಚಳುವಳಿ.

Pinterest LinkedIn Tumblr

dyfi_protest_photo_1

ಸುರತ್ಕಲ್, ಜೂನ್.10 : ಸುರತ್ಕಲ್ ನಿಂದ ಕೈಕಂಬ ಸಂಚರಿಸುವ ರಸ್ತೆಯು ಬಿ.ಎ.ಎಸ್.ಯಪ್ ಬಳಿ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಇದನ್ನು ವಿರೋಧಿಸಿ ಡಿ.ವೈ.ಎಫ್.ಐ ವತಿಯಿಂದ ರಸ್ತೆ ತಡೆದು ಪ್ರತಿಬಟನೆ ನಡೆಸಲಾಯಿತು. ಸುಮಾರು ಅರ್ದ ಗಂಟೆಗಳ ಕಾಲ ರಸ್ತೆಯನ್ನು ತಡೆದು ಪ್ರತಿಭಟಿಸಿ ಮಾತನಾಡಿದ ಡಿ.ವೈ.ಯಪ್ ಐ ಮುಖಂಡ ಮುನಿರ್ ಕಾಟಿಪಳ್ಳ ಬಾಳ ಪಂಚಾಯತ್ ವ್ಯಾಪ್ತಿಯ ಈ ರಸ್ತೆಯಲ್ಲಿ ಡೊಡ್ದ ಡೊಡ್ದ ಗುಂಡಿಗಳಿದ್ದು ಅನೇಕ ವಾಹನಗಳು ಇಲ್ಲಿ ಜಖಂಗೊಂಡಿದೆ ಮಾತ್ರವಲ್ಲದೆ ಅನೇಕ ಅಪಘಾತಗಳು ಸಂಭವಿಸಿದೆ ಎಂದು ದೂರಿದರು.

dyfi_protest_photo_2 dyfi_protest_photo_3 dyfi_protest_photo_4 dyfi_protest_photo_5 dyfi_protest_photo_6 dyfi_protest_photo_7

ಎಂ.ಅರ್.ಪಿ.ಎಲ್ ಗೆ ಸಂಚರಿಸುವ ವಾಹನಗಳಿಂದ ಈ ರೀತಿಯ ಸಮಸ್ಸ್ಯೆಯಾಗಿದೆ, ದಿನ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯನ್ನು ಅದಷ್ಟು ಬೇಗ ಸರಿಪಡಿಸಬೇಕೆಂದು ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ದೇವೆ ಆದರೂ ಈ ಬಗ್ಗೆ ಜನಪ್ರತಿನಿಧಿಗಳು ಯಾವುದೇ ಸ್ಪಂದನೆ ನೀಡಿಲ್ಲ ಎಂದು ತಿಳಿಸಿದರು.ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುದು ಎಂದರು . ನಂತರ ಸ್ಥಳಕ್ಕೆ ಬೇಟಿ ನೀಡಿದ ನಗರ ಪಾಲಿಕೆ ಇಂಜಿನಿಯರ್ ಅಬ್ದುಲ್ ಖಾದರ್ ಮಂಗಳೂರು ನಗರ ಪಾಲಿಕೆ ಕಮಿಷನರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಇಂದಿನಿಂದಲೇ ಕಾಮಗಾರಿಯ ಪ್ರಾರಂಬಿಸಲಾಗುದು ಎಂದು ಭರವಸೆ ನೀಡಿದ ಬಳಿಕ ರಸ್ತೆ ತಡೆಯನ್ನು ಹಿಂದಕ್ಕೆ ತೆಗೆಯಲಾಯಿತು.

ಈ ಸಂದರ್ಭ ಡಿ.ವೈ.ಯಪ್ ಐ ನ ಶ್ರೀನಾಥ ಕಾಟಿಪಳ್ಳ, ಬಿ.ಎಂ.ಇಂತಿಯಾಜ್, ಸಂತೋಷ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.

Write A Comment