ಕನ್ನಡ ವಾರ್ತೆಗಳು

ಶಿಕ್ಷಣಕ್ಕೆ ಮಾರ್ಗದರ್ಶನ ಸಹಿತ ಪ್ರೋತ್ಸಾಹ ಅಗತ್ಯ

Pinterest LinkedIn Tumblr

Mulky_news_photo_1

ಮೂಲ್ಕಿ,ಜೂನ್.10  :ಶಿಕ್ಷಣಕ್ಕೆ ಮಾರ್ಗದರ್ಶನದ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯವಾಗಿದ್ದು ಸಂಘ ಸಂಸ್ಥೆಗಳು ಇವರ ಆಸರೆಯಾಗಿ ಅವರಿಗೆ ಬೆಳಕನ್ನು ನೀಡುವಂತಹ ಕಾರ್ಯಕ್ರಮ ನಿರಂತರವಾಗಿ ನಡೆಸುತ್ತಿರಬೇಕು ಎಂದು ಕಾರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೋ. ವಿಷ್ಣುಮೂರ್ತಿ ಹೇಳಿದರು. ಅವರು ಮೂಲ್ಕಿ ಕಾರ್ನಾಡುವಿನ ರಿಕ್ಷಾ ಚಾಲಕ ಮಾಲಕರ ಸಂಘದ ಸಂಯೋಜನೆಯಲ್ಲಿ ಬುಧವಾರ ಕಾರ್ನಾಡು ಸಿ‌ಎಸ್‌ಐ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕವನ್ನು ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಶಾಲೆಯ ಸುಮಾರು 50 ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಉಮಾವತಿ, ಕಾರ್ನಾಡು ನೂರ್ ಮಸೀದಿಯ ಧರ್ಮಗುರು ಮೊಹಮ್ಮದ್ ಮುಸ್ತಾಫ ಹನೀಫ್, ಮೂಲ್ಕಿ ಪಟ್ಟಣ ಪಂಚಾಯಿತಿಯ ಸದಸ್ಯ ಪುತ್ತುಬಾವ ರಿಕ್ಷಾ ಚಾಲಕ ಸಂಘದ ಮಹಮ್ಮದ್ ಷರೀಫ್ ಇತರ ಸದಸ್ಯರು ಹಾಜರಿದ್ದರು. ಗೋಪಾಲ ಶಿಮಂತೂರು ಕಾರ್ಯಕ್ರಮ ನಿರೂಪಿಸಿದರು.

ನರೇಂದ್ರ ಕೆರೆಕಾಡು….

Write A Comment