ಕನ್ನಡ ವಾರ್ತೆಗಳು

ಕೊಲ್ಲೂರು ಪರಿಸರ- ಮಳೆ ಗಾಳಿಗೆ ತತ್ತರ..! ಅಪಾರ ನಷ್ಟ

Pinterest LinkedIn Tumblr

ಕುಂದಾಪುರ: ಗುರುವಾರ ಮಧ್ಯಾಹ್ನ 4 ಗಂಟೆ ಬಳಿಕ ಸುರಿದ ಭಾರೀ ಮಳೆ ಹಾಗೂ ಬೀಸಿದ ಭಾರೀ ಬಿರುಗಾಳಿಗೆ ಕೊಲ್ಲೂರು ಸಮೀಪದ ಜಡ್ಕಲ್, ಮುದೂರು, ಹಾಲ್ಕಲ್ ಪ್ರದೇಶ ತತ್ತರಗೊಂಡಿದೆ.

Kolluru_Rain_Problem (2) Kolluru_Rain_Problem Kolluru_Rain_Problem (5) Kolluru_Rain_Problem (6) Kolluru_Rain_Problem (4) Kolluru_Rain_Problem (1) Kolluru_Rain_Problem (3)

ಸಂಜೆ ಸುಮಾರಿಗೆ ಬೀಸಿದ ಭಾರೀ ಬಿರುಗಾಳಿಗೆ ಹಲವು ವಿದ್ಯುತ್ ಕಂಬಗಳು, ರಸ್ತೆ ಸಮೀಪದ ಮರಗಳು, ಬಾಳೆ ಗಿಡಗಳು ಧರಾಶಾಹಿಯಾಗಿದ್ದು ಅಪಾರ ನಷ್ಟಕ್ಕೆ ಈ ಭಾಗದ ಜನರು ಗುರಿಯಾಗಿದ್ದಾರೆ. ಸ್ಥಳದಲ್ಲಿ ಗುರುವಾರ ಸಂಜೆಯಿಂದಲೇ ವಿದ್ಯುತ್ ಸಂಪರ್ಕ ಕೈಕೊಟ್ಟಿದ್ದು, 4-5 ಕಿ.ಮೀ. ವ್ಯಾಪ್ತಿಯಲ್ಲಿ ಬಹುತೇಕ ವಿದ್ಯುತ್ ಕಂಬಗಳು ನೆಲಕ್ಕುರುಳಿದಿದೆ.

ಬಾಳೆಗಿಡಗಳು ನೆಲಸಮ: ಪರಿಸರದಲ್ಲಿ ಬೀಸಿದ ಭಾರೀ ಬಿರುಗಾಳಿಗೆ ಕೊಲ್ಲೂರು ಸಮೀಪದ ಜಡ್ಕಲ್ ಪರಿಸರದ ಹಲವು ಭಾಗಗಳ 50000 ಕ್ಕೂ ಅಧಿಕ ಬಾಳೆ ಗಿಡಗಳು ನೆಲಕಚ್ಚಿದೆ. ಇನ್ನೇನು ಒಂದೆರಡು ವಾರಗಳಲ್ಲಿ ಬಾಳೆ ಗೊನೆಗಳು ಫಸಲಾಗುತ್ತಿದ್ದ ಈ ಸಂದರ್ಭದಲ್ಲಿ ಬಾಳೆ ಗಿಡಗಳು ನಾಶವಾದ ಕಾರಣ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಹತ್ತಕ್ಕೂ ಅಧಿಕ ಮಾಲೀಕರಿಗೆ ಸೇರಿದ ವಿವಿಧ ತೋಟಗಳಲ್ಲಿನ 5000 ಸಾವಿರಕ್ಕೂ ಅಧಿಕ ಬಾಳೆಗಿಡಗಳು ನಾಶವಾಗಿರುವ ಬಗ್ಗೆ ಮಾಹಿತಿಯಿದೆ.

Write A Comment