ಕನ್ನಡ ವಾರ್ತೆಗಳು

ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕಗಳಿಸಿದ ಅವಳಿ ಜವಳಿಗಳು

Pinterest LinkedIn Tumblr
Twins_Puc_Mark
ಮಂಗಳೂರು,ಮೇ.20 : ಅವಳಿ ಜವಳಿ ಸಹೋದರಿಯರಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಎಂ. ಅನನ್ಯ ಪ್ರಭು ಹಾಗೂ ಎಂ. ಅಮೂಲ್ಯ ಪ್ರಭು ಅವರು 569 ಸಮಾನ ಅಂಕ ಪಡೆದಿದ್ದಾರೆ.

ಮೂಲತಃ ಕಾಸರಗೋಡು ನಿವಾಸಿಗಳಾಗಿರುವ ಇವರು ಪ್ರಸ್ತುತ ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿ ವಾಸವಾಗಿದ್ದು, ವೈದ್ಯರಾಗಿರುವ ಡಾ| ಎಂ. ಗೋಪಿನಾಥ್‌ ಪ್ರಭು ಹಾಗೂ ಗೀತಾ ಬಿ. ಪ್ರಭು ಅವರ ಪುತ್ರಿಯರು.

ಎಂ. ಅನನ್ಯ ಪ್ರಭು ಹಾಗೂ ಎಂ. ಅಮೂಲ್ಯ ಪ್ರಭು ಇಬ್ಬರೂ ಕೂಡ ಒಟ್ಟು ಒಂದೇ ರೀತಿಯ ಅಂಕ ಪಡೆದಿರುವ ಜತೆಗೆ ಅರ್ಥಶಾಸ್ತ್ರದಲ್ಲಿ (95) ಹಾಗೂ ಅಕೌಂಟೆನ್ಸ್‌(100)ನಲ್ಲಿ 100 ಅಂಕ ಸಮಾನವಾಗಿ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

 

Write A Comment