ಮಂಗಳೂರು,ಮಾರ್ಚ್.18 : ಮಹಾನಗರ ಪಾಲಿಕೆ ಅಧಿಕಾರಿಗಳಿಂದ ನಗರದಲ್ಲಿ ಎರಡನೇ ದಿನವಾದ ಬುಧವಾರವೂ ಅನಧಿಕೃತ ಗೂಡಂಗಡಿಗಳ, ಬೀದಿ ವ್ಯಾಪಾರಿ ಅಂಗಡಿಗಳ ತೆರವು ಕಾರ್ಯಾಚರಣೆ ಮುಂದುವರಿಸಿದರು. ಮಂಗಳವಾರದಿಂದ ಆರಂಭಿಸಿರುವ ಈ ತೆರವು ಕಾರ್ಯಾಚರಣೆಯನ್ನು ಸ್ಟೇಟ್‌ಬ್ಯಾಂಕ್ ನ ಸುತ್ತಮುತ್ತಲಿನ ಪ್ರದೇಶವಾದ ಪುರಭವನ, ಲೇಡಿಗೋಷನ್ ಆಸ್ಪತ್ರೆ ಪರಿಸರದಲ್ಲಿ ಇಡಲಾಗಿದ್ದ ಗೂಡಂಗಡಿಗಳಿಗೆ ಇಂದು ಮುಕ್ತಿ ಸಿಕ್ಕಿದೆ.
ಈ ರೀತಿಯ ರಸ್ತೆ ಬದಿ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ನಡೆದಾಡುವುದಕ್ಕೂ ಕಷ್ಟಕರವಾಗಿತ್ತು. ಕಾರ್ಯಚರಣೆ ಸಂಧರ್ಭ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆಯನ್ನು ಆಯೋಜಿಸಲಾಗಿತ್ತು.