ಕನ್ನಡ ವಾರ್ತೆಗಳು

ಗಂಗೊಳ್ಳಿ ಪ್ರಕರಣ; ದೇಶದೆಲ್ಲೆಡೆ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಯನ್ನು ಮುಚ್ಚಿಡುವ ತಂತ್ರ; ಶೋಭಾ ಕರಂದ್ಲಾಜೆ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿಯಲ್ಲಿ ನಡೆದ ಬೆಂಕಿ ಪ್ರಕರಣಕ್ಕೂ ದೇಶದೆಲ್ಲೆಡೆ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ನಂಟಿರುವ ಸಾಧ್ಯತೆಗಳಿದ್ದು, ವಿದ್ವಂಸಕ ಕೃತ್ಯಗಳಲ್ಲಿ ಭಟ್ಕಳದ ಉಗ್ರರು ಶಾಮೀಲಾಗಿದ್ದು ಈ ಪ್ರಕರಣವನ್ನು ದಾರಿತಪ್ಪಿಸುವ ಸಲುವಾಗಿ ದುಷ್ಕರ್ಮಿಗಳು ಉಡುಪಿ ಜಿಲ್ಲೆಯ ಕೆಲವೆಡೆ ದಾಂಧಲೆ ನೆಡೆಸುತ್ತಿರಬಹುದೆಂಬ ಶಂಕೆಯಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರದ್ಲಾಂಜೆ ಹೇಳಿದ್ದಾರೆ.

ಗುರುವಾರ ಗಂಗೊಳ್ಳಿಗೆ ಭೇಟಿ ನೀಡಿ ಗಂಗೊಳ್ಳಿಯಲ್ಲಿ ದುಷ್ಕರ್ಮಿಗಳಿಂದ ಹಾನಿಗೀಡಾಗಿರುವ ಅಂಗಡಿ ಹಾಗೂ ವಾಹನಗಳನ್ನು ಪರಿಶೀಲಿಸಿದ ಬಳಿಕ ಹೆಮ್ಮಾಡಿಯ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

Shobha_Visit_Gangolli (12) Shobha_Visit_Gangolli Shobha_Visit_Gangolli (1) Shobha_Visit_Gangolli (2) Shobha_Visit_Gangolli (3) Shobha_Visit_Gangolli (4) Shobha_Visit_Gangolli (5) Shobha_Visit_Gangolli (6) Shobha_Visit_Gangolli (7) Shobha_Visit_Gangolli (8) Shobha_Visit_Gangolli (9) Shobha_Visit_Gangolli (10) Shobha_Visit_Gangolli (11)

ಇತ್ತೀಚೆಗೆ ಭಟ್ಕಳದ ಭಯೋತ್ಪಾದಕರಿಗೂ ಮತ್ತು ದೇಶದೆಲ್ಲೆಡೆ ಕುಕೃತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವವರು ಹಾಗೂ ಗಂಗೊಳ್ಳಿ ಪ್ರಕರಣದ ನಂಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಕೋಮುಗಲಭೆ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ ಎಂಬ ಧೈರ್ಯದಿಂದ ವಿವಿಧೆಡೆ ಇಂತಹ ಕೃತ್ಯಗಳನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರದ ಅವಧಿಯಲ್ಲಿ ಇಂತಹ ಕೋಮುಗಲಭೆಗಳು ವ್ಯಾಪಕವಾಗಿ ನಡೆಯುತ್ತಿರುವುದು ಅವರ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದವರು ಆರೋಪಿಸಿದರು.

ಗಂಗೊಳ್ಳಿಯಲ್ಲಿ ಅಂಗಡಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸಂಸದ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ ಎಂದ ಅವರು, ಗಂಗೊಳ್ಳಿ ಬೆಂಕಿ ಹಾಗೂ ಗಲಭೆ ಪ್ರಕರಣವನ್ನು ರಾಜಕೀಯ ರಹಿತಗೊಳಿಸಬೇಕು, ಪ್ರಕರಣದ ತನಿಖೆಯ ಸಲುವಾಗಿ ಪೊಲೀಸರಿಗೆ ಈ ದುಷ್ಕೃತ್ಯದ ಜಾಡನ್ನು ಪತ್ತೆಹಚ್ಚಲು ಸರಕಾರ ನೀಡಬೇಕು. ಯಾವುದೇ ರಾಜಕೀಯ ಹಸ್ತಕ್ಷೇಪಕಕ್ಕೆ, ಒತ್ತಡಕ್ಕೆ ಮಣಿಯಬಾರದು ದುಷ್ಕತ್ಯ ನಡೆಸುವವರ ಜಾಡನ್ನು ಕಂಡು ಹಿಡಿಯಲು ಮತ್ತು ಘಟನೆಯ ಸಮಗ್ರ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕೆಂದು ಅವರು ಈ ಸಂದರ್ಭ ಹೇಳಿದರು.

ಬೆಂಗಳೂರಿನಲ್ಲಿ ಬಾಂಬ್ ಸ್ಪೋಟದ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರೂ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಾಂಬ್ ಸ್ಪೋಟ ನಡೆದಾಗ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಕೇಂದ್ರ ಸ್ಥಾನದಲ್ಲಿರಲಿಲ್ಲ. ಹಿಂದು ಸಂಘಟನೆಗಳ ಬಾಯಿ ಮುಚ್ಚಿಸುವ ಉದ್ದೇಶದಿಂದ ಪ್ರತಿಯೊಂದು ಪ್ರಕರಣಗಳಲ್ಲಿ ಅಮಾಯಕರನ್ನು ಬಂಧಿಸುವ ಕಕಾರ್ಯ ನಡಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬೈಂದೂರು ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುರಾಜ್ ಗಂಟಿಹೊಳೆ, ಬೈಂದೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕುಂದಾಪುರ ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.

ಗಂಗೊಳ್ಳಿ ಭೇಟಿ: ಈ ಮೊದಲು ಗಂಗೊಳ್ಳಿಗೆ ಭೇಟಿ ನೀಡಿದ ಅವರು ಅಂಗಡಿ ಮಾಲೀಕರ ಬಳಿ ಮಾತುಕತೆ ನಡೆಸಿದರು. ಬುಧವಾರ ಮುಂಜಾನೆ ಅಂಗಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ಕೃತ್ಯವನ್ನು ಸಿಸಿಟಿವಿಯಲ್ಲಿ ವೀಕ್ಷಿಸಿದ ಸಂಸದೆ ಶೋಭಾ ಕರದ್ಲಾಂಜೆ ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದರು.

ಆಸ್ಪತ್ರೆಗೆ ಭೇಟಿ: ಬುಧವಾರ ಗಂಗೊಳ್ಳಿಯಲ್ಲಿ ಬಂದ್ ವೇಳೆ ನಡೆದ ಗುಂಪುಗಳ ನಡಡುವಿನ ಗಲಭೆಯಲ್ಲಿ ಗಾಯಗೊಂಂಡ ಗಾಯಾಳುಗಳನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿ‌ಇಸಿದ ಶೋಭಾ ಕರಂದ್ಲಾಜೆ ಅವರು ಘಟನೆ ಕುರಿತು ಮಾಹಿತಿ ಪಡೆದರು.

Write A Comment