ಕುಂದಾಪುರ: ಗಂಗೊಳ್ಳಿ ಟೌನ್ ಸೌಹಾರ್ದದಿಂದ ಸೌಹಾರ್ದ ಸಹಕಾರಿ ದಿನ ಮತ್ತು ಸ್ವಚ್ಚ ಭಾರತಕ್ಕಾಗಿ ಸಹಕಾರಿಗಳು ಕಾರ್ಯಕ್ರಮವನ್ನು ಗುರುವಾರ ಆಚರಿಸಲಾಯಿತು.
ಸಹಕಾರಿಯ ಅಧ್ಯಕ್ಷ ಎಚ್. ಗಣೇಶ್ ಕಾಮತರವರು ಸಹಕಾರಿಯ ಕಛೇರಿಯಲ್ಲಿ ಸಹಕಾರಿ ಧ್ವಜಾರೋಹಣ ಮಾಡಿದರು.
ಬಳಿಕ ಸಹಕಾರಿಯ ಎಲ್ಲಾ ನಿರ್ದೇಶಕರು, ಸಿಬ್ಬಂದಿ ವರ್ಗದವರು ಸಹಕಾರಿಯ ಕಚೇರಿಯ ವಠಾರದ ಸ್ವಚ್ಚತೆ ಕಾರ್ಯಕ್ರಮವನ್ನು ಕೈಗೊಂಡರು. ಇದೇ ಸಂದರ್ಭ “ಸ್ವಚ್ಚ ಭಾರತಕ್ಕಾಗಿ ಸಹಕಾರಿಗಳು” ಎಂಬ ಘೋಷದೊಂದಿಗೆ ಸ್ಥಳೀಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ, ಸರಸ್ವತಿ ವಿದ್ಯಾಲಯ ಪ್ರಾಥಮಿಕ ಶಾಲೆ ಹಾಗೂ ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ಒಟ್ಟು ೫೦ ಕಸದ ಬುಟ್ಟಿಗಳನ್ನು ಹಸ್ತಾಂತರಿಸಲಾಯಿತು.
ಕಾಲೇಜಿನ ಸಂಚಾಲಕ ಎನ್.ಸದಾಶಿವ ನಾಯಕ್, ಪ್ರಾಂಶುಪಾಲ ಆರ್. ಎನ್.ರೇವಣ್ಕಾರ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಎಂ. ಶಂಕರ ಖಾರ್ವಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಮನಾ ಪಡಿಯಾರ್ ಹಾಗೂ ಅಂಗನವಾಡಿ ಕೇಂದ್ರದ ಶಿಕ್ಷಕಿಯರು ಸಹಕಾರಿಯ ಕೊಡುಗೆಯನ್ನು ಸ್ವೀಕರಿಸಿದರು. ಸಹಕಾರಿಯ ಉಪಾಧ್ಯಕ್ಷ ಜಿ. ವೇದವ್ಯಾಸ ಕೆ. ಆಚಾರ್ಯ, ನಿರ್ದೇಶಕರಾದ ಬಿ.ಮಂಜುನಾಥ ಶೆಣೈ, ಕೆ.ಗೋಪಾಲಕೃಷ್ಣ ನಾಯಕ್, ಬಿ.ಪ್ರಕಾಶ ಶೆಣೈ, ವೆಂಕಟೇಶ ನಾಯಕ್, ಸಹಕಾರಿಯ ಅಧಿಕಾರಿ ಕೆ.ಶ್ರೀನಿವಾಸ ನಾಯಕ್, ಚೇತನ್ ಕಾಮತ ಉಪಸ್ಥಿತರಿದ್ದರು.