ಕನ್ನಡ ವಾರ್ತೆಗಳು

ಮಂಗಳೂರು: ನೂತನ ಪೊಲೀಸ್ ಕಮಿಷನರ್ ಎಸ್.ಮುರುಗನ್ ಅಧಿಕಾರ ಸ್ವೀಕಾರ.

Pinterest LinkedIn Tumblr

New_Cammisnr_1

ಮಂಗಳೂರು,ಜ.2 : ಮಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಎಸ್.ಮುರುಗನ್ ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಕಮಿಷನರ್ ಆರ್. ಹಿತೇಂದ್ರ ನೂತನ ಕಮಿಷನರ್‌ಗೆ ಅಧಿಕಾರ ಹಸ್ತಾಂತರಿಸಿದರು.

New_Cammisnr_murgan_2

ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಎಸ್.ಮುರುಗನ್, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಎಎಸ್‌ಪಿಯಾಗಿ ಈ ಹಿಂದೆ ಕೆಲಸ ಮಾಡಿದ ಅನುಭವ ಇರುವುದರಿಂದ ಇಲ್ಲಿನ ಜನರೊಂದಿಗೆ ಉತ್ತಮ ಬಾಂಧವ ಇದ್ದು, ಈ ಹಿನ್ನೆಲೆಯಲ್ಲಿ ಇಲ್ಲಿ ಕರ್ತವ್ಯ ನಿರ್ವಹಣೆ ಕಷ್ಟವಾಗದು ಎಂದರು. ಮಂಗಳೂರನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಭಾವಿಸುವುದು ತಪ್ಪು. ಇದು ಜನರ ಭಾವನೆಗೆ ಸಂಬಂಧಪಟ್ಟದ್ದು. ಪೊಲೀಸರು ಆ ಪಕ್ಷ, ಈ ಪಕ್ಷ , ಧರ್ಮ ಎಂಬುದನ್ನು ಪರಿಗಣಿಸದೆ ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಬೇಕಿದೆ. ಇದಕ್ಕೆ ಜನಸಾಮಾನ್ಯರು ಕೂಡ ಸಹಕಾರ ನೀಡಬೇಕಿದೆ ಎಂದು ಕೋರಿದರು.

New_Cammisnr_murgan_1New_Cammisnr_murgan_3

ಮಂಗಳೂರಿನಲ್ಲಿ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಸ್ಥಾಪಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಿಷನರ್, ಬೇಡಿಕೆ ಬಂದರೆ ಸರಕಾರ ಈ ಬಗ್ಗೆ ಚಿಂತನೆ ನಡೆಸಲಿದೆ. ಇದುವರೆಗೆ ಖಾಸಗಿ ಸಂಸ್ಥೆ ಇನ್‌ಫೋಸಿಸ್‌ನಿಂದ ಮಾತ್ರ ಈ ಬಗ್ಗೆ ಬೇಡಿಕೆ ಬಂದಿದೆ. ಉಳಿದಂತೆ ಎಲ್ಲ ಬೃಹತ್ ಇಂಡಸ್ಟ್ರಿಗಳಿಗೆ ಸಿಐಎಸ್‌ಎಫ್ ಭದ್ರತೆಯಂತೆ ಕರ್ನಾಟಕ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಭದ್ರತೆ ನೀಡುವ ಬಗ್ಗೆ ಎಲ್ಲಿಂದಲೂ ಬೇಡಿಕೆ ಬಂದಿಲ್ಲ. ಬಂದರೆ ಸರಕಾರ ಈ ಬಗ್ಗೆ ಚಿಂತನೆ ನಡೆಸಲಿದೆ ಎಂದು ತಿಳಿಸಿದರು.

Write A Comment