ಕನ್ನಡ ವಾರ್ತೆಗಳು

ಕಾಸರಗೋಡು : ಆಬಿದ್ ಕೊಲೆ ಪ್ರಕರಣ – ಮೂವರು ಆರೋಪಿಗಳ ಸೆರೆ

Pinterest LinkedIn Tumblr

kasragod_amisd_murder_1

ಕಾಸರಗೋಡು, ಡಿ.27: ಎಸ್‌ಡಿಪಿಐ ಕಾರ್ಯಕರ್ತ ತಲಂಗರೆ ನುಶ್ರತ್ ನಗರಿನ ಆಬಿದ್‌ರನ್ನು ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಬೀರಂತಬೈಲ್‌ನ ಎಲೆಕ್ಟ್ರಿಶಿಯನ್ ತೇಜಸ್(19), ಪಾರೆಕಟ್ಟೆಯ ಅಭಿಷೇಕ್(20) ಮತ್ತು ಕೂಡ್ಲುಪಚ್ಚಕ್ಕಾಡ್‌ನ ಅಕ್ಷಯ್ ರೈ(24)ಎಂದು ಗುರುತಿಸಲಾಗಿದೆ.

ಕೊಲೆ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹಳೆದ್ವೇಷ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯದಲ್ಲಿ 10ಕ್ಕೂ ಅಕ ಮಂದಿ ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಕೃತ್ಯದಲ್ಲಿ ಶಾಮೀಲಾದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕೊಲೆ ನಡೆದಂದು ರಾತ್ರಿ 9 ಗಂಟೆಗೆ ತೇಜಸ್ ಮತ್ತು ಅಭಿಷೇಕ್ ನಗರದ ಅಂಗಡಿಯೊಂದರಲ್ಲಿ ಆಬಿದ್ ಇರುವುದನ್ನು ಖಚಿತ ಪಡಿಸಿದ ಬಳಿಕ ಹಂತಕರಿಗೆ ಮಾಹಿತಿ ನೀಡಿದ್ದರು. ಸುಮಾರು 9:30ಕ್ಕೆ ಅಂಗಡಿಗೆ ನುಗ್ಗಿದ ತಂಡವು ಆಬಿದ್‌ರನ್ನು ಕಡಿದು ಹತ್ಯೆ ಮಾಡಿತ್ತು. ವರ್ಷದ ಹಿಂದೆ ಅಣನ್ಗೂರು ಜೆ.ಪಿ. ಕಾಲನಿಯ ಜ್ಯೋತಿಷ್ ಎಂಬ ಯುವಕನ ಕೊಲೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಬಿದ್‌ನನ್ನು ಪೊಲೀಸರು ಬಂಸಿದ್ದರು. ಈ ಹಿನ್ನ್ನೆಲೆಯಲ್ಲಿ ಆಬಿದ್‌ನ ಕೊಲೆಗೆ ಕೆಲ ಸಮಯದಿಂದಲೇ ಸಂಚು ನಡೆಯುತ್ತಿದ್ದು, ಕೃತ್ಯದಲ್ಲಿ 7 ಮಂದಿ ನೇರ ಶಾಮೀಲಾಗಿದ್ದು, ಇತರರು ಆರೋಪಿಗಳಿಗೆ ನೆರವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡಿ.22ರಂದು ರಾತ್ರಿ ಆಬಿದ್‌ರನ್ನು ಕೊಲೆಗೈಯ್ಯಲಾಗಿತ್ತು.

Write A Comment