ಕನ್ನಡ ವಾರ್ತೆಗಳು

ಡಿ .21: ವೆನ್ಲಾಕ್ ಆಸ್ಪತ್ರೆಯಲ್ಲಿ ಸಂವೇದನಶೀಲ ಕಾರ್ಯಕ್ರಮ.

Pinterest LinkedIn Tumblr

wenlck_hoptal_photo

ಮಂಗಳೂರು,ಡಿ.19: ಅಂತರಾಷ್ಟ್ರೀಯ ಮಹಿಳಾ ಸೇವಾ ಸಂಸ್ಥೆ ಇನ್ನರ್ ವ್ಹೀಲ್, ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ತಾ. 21 ಡಿಸೆಂಬರ್ 2014 ರಂದು ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿರುವ ಆರ್.ಎ.ಪಿ.ಸಿ.ಸಿ. ಸಭಾಂಗಣದಲ್ಲಿ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿ ದಾದಿಯವರಿಗೆ ಒಂದು ದಿನದ ಸಂವೇದನಶೀಲ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆಸ್ಪತ್ರೆಯಲ್ಲಿ ಎಲ್ಲಾ ಮೂಲಭೂತ ಹಾಗೂ ವೈದ್ಯಕೀಯ ಸವಲತ್ತುಗಳು ಇದ್ದರೂ, ರೋಗಿಗಳಿಗೆ ಸಂಪೂರ್ಣ ಸಮಾಧಾನ ಸಿಗಬೇಕಿದ್ದರೆ ಇವರಿಗೆ ಶುಶ್ರೂಷೆ ನೀಡುವ ದಾದಿವರ್ಗ ಇವರ ಜೊತೆ ಅತ್ಯಂತ ಸಹಾನುಭೂತಿ ಹಾಗೂ ಸಂಯಮದೊಂದಿಗೆ ನಡೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸಮಯ ಸಮಯಕ್ಕೆ ಸಿಬ್ಬಂದಿ ವರ್ಗಕ್ಕೆ ತರಬೇತಿಯ ಅವಶ್ಯವಿದೆ.

ಬೆಂಗಳೂರಿನ ಎಸ್.ಡಿ. ಆಂಡ್ ಅಸೋಸಿಯೇಟ್ಸ್‌ನ ಸಂಸ್ಥಾಪಕ ಸಿ.ಇ.ಒ. ಶ್ರೀ ಸ್ಟ್ಯಾನ್ಲಿ ಡೇವಿಡ್ ನೀಡಲಿರುವ ಈ ತರಬೇತಿ ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಾದ ಶ್ರೀ ಯು. ಟಿ. ಖಾದರ್ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದು, ಇಂತಹ ತರಬೇತಿ ಕಾರ್ಯಕ್ರಮಗಳ ಮೂಲಕ ರೋಗಿಗಳಿಗೆ ನೀಡುವ ಶುಶ್ರೂಷೆಯಲ್ಲಿ ಗಮನಾರ್ಹ ಗುಣಾತ್ಮಕ ಬದಲಾವಣೆ ಆಗಬಹುದೆಂಬ ಆಶಯ ವ್ಯಕ್ತಪಡೆಸಿದ್ದಾರೆ.

ಸುಮಾರು 100  ದಾದಿಗಳು ಪಡೆಯಲಿರುವ ಈ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ 21-12-2014ರಂದು ಮಧ್ಯಾಹ್ನ 3.00 ಗಂಟೆಗೆ ಮಾನ್ಯ ಸಚಿವ ಶ್ರೀ ಯು. ಟಿ. ಖಾದರ್ ಉಪಸ್ಥಿತಿಯಲ್ಲಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ :
ಡಾ| ಮಾಲಿನಿ ಹೆಬ್ಬಾರ್, ಸಂಘಟಕರು
ಇನ್ನರ್ ವ್ಹೀಲ್  ಮಾಜಿ ಜಿಲ್ಲಾಧ್ಯಕ್ಷೆ
ದೂರವಾಣಿ ಸಂಖ್ಯೆ : : 9845517174
ಇಮೇಲ್ : hebbarmalini@gmail.com

ಶ್ರೀಮತಿ ನಳಿನಿ ಕಿಣಿ, ಅಧ್ಯಕ್ಷೆ
ಇನ್ನರ್ ವ್ಹೀಲ್ ಮಂಗಳೂರು ಉತ್ತರ ವಲಯ
ದೂರವಾಣಿ ಸಂಖ್ಯೆ : 9448858271
ಇಮೇಲ್ : nalinikini@hotmail.com

Write A Comment