ಕನ್ನಡ ವಾರ್ತೆಗಳು

ಕಾಟಿಪಳ್ಳ : ಯುವಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ | ಅರೋಪಿಗಳ ಬಂಧನಕ್ಕೆ ಆಗ್ರಹಿಸಿ ರಾತ್ರಿಯೇ ಪ್ರತಿಭಟನೆ

Pinterest LinkedIn Tumblr

katipall_toushf_photo

ಮಂಗಳೂರು, ಡಿ.12: ಯುವಕನೊಬ್ಬನಿಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಯುಧಗಳಿಂದ ಇರಿದು ಪರಾರಿ ಯಾದ ಘಟನೆ ಕಾಟಿಪಳ್ಳ 3ನೆ ಬ್ಲಾಕ್‌ನಲ್ಲಿ ಗುರುವಾರ ರಾತ್ರಿ 9:45ರ ಸುಮಾರಿಗೆ ನಡೆದಿದೆ.

ಕಾನ ನಿವಾಸಿ ತೌಸೀಫ್(28) ಎಂಬವರೇ ಇರಿತಕ್ಕೊಳಗಾದವರು. ತೌಸೀಫ್ ಕೈಕಂಬದ ಜಿಮ್‌ನಿಂದ ಬೈಕ್‌ನಲ್ಲಿ ಮರಳಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ.

ಬೈಕ್‌ನಲ್ಲಿ ಬರುತ್ತಿದ್ದ ತೌಸೀಫ್‌ರಿಗೆ ಇನ್ನೊಂದು ಬೈಕ್‌ನಲ್ಲಿ ಬಂದ ಇಬ್ಬರು ನಿಲ್ಲಿಸುವಂತೆ ಸೂಚಿಸಿ ದರು. ಅವರ ಸೂಚನೆಗೆ ಸ್ಪಂದಿಸಿ ತೌಸೀಫ್ ಬೈಕನ್ನು ಅಲ್ಲೇ ನಿಲ್ಲಿಸಿದರು. ಆಗ ಅಪರಿಚಿತರಿಬ್ಬರ ಬಳಿ ಮಾರಕಾಯುಧಗಳಿರುವುದನ್ನು ಗಮನಿಸಿದ ತೌಸೀಫ್ ಬೈಕನ್ನು ಅಲ್ಲೇ ಬಿಟ್ಟು ಓಡಲೆತ್ನಿಸಿದರು. ಅಷ್ಟರಲ್ಲಿ ತೌಸೀಫ್‌ರನ್ನು ಗುರಿ ಯಾಗಿಸಿ ದುಷ್ಕರ್ಮಿಗಳು ಮಾರ ಕಾಯುಧವನ್ನು ಬೀಸಿದರು.

ಈ ವೇಳೆ ಪೂರ್ಣ ಪ್ರಮಾಣದ ದಾಳಿಯಿಂದ ತಪ್ಪಿಸಿಕೊಂಡರೂ ಸಣ್ಣ ಪ್ರಮಾಣ ದಲ್ಲಿ ತೌಸೀಫ್ ಗಾಯಗೊಂಡರು. ಅಷ್ಟರಲ್ಲಿ ತೌಸೀಫ್‌ರ ಬೊಬ್ಬೆ ಕೇಳಿ ಸ್ಥಳಕ್ಕೆ ಸ್ಥಳೀಯರು ಆಗಮಿ ಸಲಾರಂಭಿಸಿದರು. ಇದರಿಂದ ಬೆದರಿದ ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾದರು ಎಂದು ತೌಸೀಫ್ ತಿಳಿಸಿದ್ದಾರೆ.

ರಾತ್ರಿಯೇ ಹಠಾತ್ ಪ್ರತಿಭಟನೆ :

ತೌಸೀಫ್‌ರ ಮೇಲೆ ನಡೆದ ದಾಳಿಯ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ದುಷ್ಕರ್ಮಿಗಳನ್ನು ಕೂಡಲೇ ಬಂಧಿ ಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ಆರಂಭಿಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಬಿ.ಎ.ಮೊಯ್ದಿನ್ ಬಾವ, ಪಿಎಫ್‌ಐ ನಾಯಕ ಅಬೂಬಕರ್ ಕುಳಾಯಿಯವರು ಸಾರ್ವಜನಿಕರನ್ನು ಸಮಾಧಾನಪಡಿಸಲು ಯತ್ನಿಸಿದರು. ಇಂದು ರಾತ್ರಿಯೇ ದುಷ್ಕರ್ಮಿ ಗಳನ್ನು ಬಂಧಿಸುವ ಭರವಸೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪಡೆದ ಬಳಿಕವಷ್ಟೇ ಸಾರ್ವಜನಿಕರು ಪ್ರತಿಭಟನೆಯನ್ನು ಹಿಂಪಡೆದರು. ಸ್ಥಳಕ್ಕೆ ಆಗಮಿಸಿದ ಸುರತ್ಕಲ್ ಪೊಲೀಸರು ಬಿಗಿಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.

Write A Comment