ಕನ್ನಡ ವಾರ್ತೆಗಳು

ಡಿ.12.- `ತುಳುವೆರೆ ಪರ್ಬ’ದ ಸಂಭ್ರಮ.

Pinterest LinkedIn Tumblr

tulu_prbha_pressmeet_1

ಮಂಗಳೂರು,ಡಿ.11 : ತುಳು ಭಾಷೆ, ಸಂಸ್ಕೃತಿ ರಕ್ಷಣೆಯ ದೃಷ್ಟಿಯಿಂದ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂದ ಕಾಲೇಜ್ ಆವರಣದಲ್ಲಿ ಆಯೋಜಿಸಲಾಗಿರುವ `ವಿಶ್ವ ತುಳುವೆರೆ ಪರ್ಬ’ ಡಿ.12 ಶುಕ್ರವಾರ ಸಂಜೆ ಉದ್ಘಾಟನೆಗೊಳ್ಳಲಿದೆ. ಮೂರು ದಿನಗಳ ಕಾಲ ನಡೆಯುವ ತುಳುವೆರೆ ಪರ್ಬ ಜಾತ್ರೆಯ ವಾತಾವರಣವನ್ನು ನಿರ್ಮಿಸಿದ್ದು ಲಕ್ಷಾಂತರ ತುಳು ಭಾಷಾಪ್ರೇಮಿಗಳು ಭಾಗವಹಿಸುವ ಮೂಲಕ ಅದ್ಧೂರಿಯಾಗಿ ನಡೆಯಲಿದೆ ಎಂದು ವಿಶ್ವ ತುಳುವೆರೆ ಪರ್ಬ ಸಮಿತಿ ಕಾರ್ಯಾಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಡಿ.12ರ ಸಂಜೆ 5.30ಕ್ಕೆ ವಿಶ್ವ ತುಳುವೆರೆ ಪರ್ಬಕ್ಕೆ ಚಾಲನೆ ನೀಡಲಿದ್ದು. ಸಮಾರೋಪ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಸಾಹಿತಿ, ಚಿಂತಕರು ಮಾತ್ರವಲ್ಲದೆ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಡಿ.12ರಂದು ಸಹ್ಯಾದ್ರಿ ತುಳುವೆರೆ ಐಸಿರಿ, ಪುಸ್ತಕ ಭಂಡಾರ, ಕಡಪುದ ಓಡ, ಅಟಿಲ್ ಅರಗಣೆ, ಪ್ರದರ್ಶನಾಲಯ, ಛಾಯಾಚಿತ್ರ ಮಂಟಪದ ಉದ್ಘಾಟನೆ ಇತ್ಯಾದಿ ಕಾರ್ಯಕ್ರಮ ನೆರವೇರಲಿದೆ.

tulu_prbha_pressmeet_2

ತಾಲೀಮು, ಸೈಕಲ್ ಬ್ಯಾಲೆನ್ಸ್, ತುಳುನಾಡ ತಿಂಡಿ ತಿನಿಸು, ಸಂತೆದ ಕಲ, ಬಲೇ ತೆಲಿಪಾಲೆ, ಕಾವ್ಯ-ಗಾನ-ಕುಂಚ-ನಲಿಕೆ, ಗೋಷ್ಠಿಗಳು, ತುಳು-ಕೊಂಕಣಿ-ಬ್ಯಾರಿ ಅಕಾಡೆಮಿ ಪ್ರಾಯೋಜಿತ ಕಲಾ ಕಾರ್ಯಕ್ರಮಗಳು, ತುಳುವೆರೆ ತುತ್ತೈತ, ತುಳುನಾಡ ವೈಭವ, ಗಾಣದ ಕೊಟ್ಯ, ಪ್ರಾತ್ಯಕ್ಷಿಕೆಗಳು, ಯಕ್ಷಗಾನ, ಪಾಡ್ದನ ಮೇಳ, ನೃತ್ಯ-ಸಂಗೀತ-ಜಾನಪದ ವೈವಿದ್ಯಗಳು ತುಳುವರ ಹಬ್ಬದ ಕಳೆಯೇರಿಸಲಿವೆ ಎಂದು ಧರ್ಮಪಾಲ ದೇವಾಡಿಗ ಅವರು ಈ ಸಂದರ್ಭ ಹೇಳಿದರು.

tulu_prbha_pressmeet_3

ತುಳುವೆರೆ ಪರ್ಬ ನಡೆಯುವ ಸಭಾಂಗಣ ಮತ್ತು ವೇದಿಕೆಗಳಿಗೆ ಎಸ್.ಯು.ಪಣಿಯಾಡಿ, ಎಸ್.ಆರ್.ಹೆಗ್ಡೆ, ಪಾದೂರು ಗುರುರಾಜ್ ಭಟ್, ವಿಶು ಕುಮಾರ್, ಡಾ.ವೆಂಕಟರಾಜ ಪುಣಿಂಚಿತ್ತಾಯ, ಕೆದಂಬಾಡಿ ಜತ್ತಪ್ಪ ರೈ ಅವರ ಹೆಸರನ್ನಿರಿಸಲಾಗಿದೆ ಎಂದು ಧರ್ಮಪಾಲ ದೇವಾಡಿಗ ತಿಳಿಸಿದರು. ತುಳು ಅಕಾಡೆಮಿಯ ಅಧ್ಯಕ್ಷೆ ಜಾನಕಿ ಎಸ್.ಬ್ರಹ್ಮಾವರ, ತುಳು ಪರ್ಬದ ಸಂಯೋಜಕ ಎ.ಸಿ.ಭಂಡಾರಿ, ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಉಪಸ್ಥಿತರಿದ್ದರು.

Write A Comment