ಕನ್ನಡ ವಾರ್ತೆಗಳು

ಗಂಗೊಳ್ಳಿ ಗಲಭೆ ಪ್ರಕರಣ: ಪ್ರಮುಖರ ಜೊತೆ ಶಾಂತಿ ಸಭೆ ನಡೆಸಿದ ಉಡುಪಿ ಎಸ್ಪಿ, ಕುಂದಾಪುರ ಎ.ಸಿ. ಹಾಗೂ ತಹಶಿಲ್ದಾರ್

Pinterest LinkedIn Tumblr

Gangolli_peace_ meeting (17)

ಕುಂದಾಪುರ: ಕಳೆದ ಕೆಲವು ದಿನಗಳಿಂದ ಗಂಗೊಳ್ಳಿಯಲ್ಲಿ ಇದ್ದ ಪರಿಸ್ಥಿತಿ ಇದೀಗ ತಿಳಿಯಾಗುತ್ತದ್ದು, ಶಾಂತಿಯ ವಾತಾವರಣ ಮೂಡುತ್ತಿದೆ. ಗಂಗೊಳ್ಳಿ ಮಾತ್ರವಲ್ಲದೆ ಉಡುಪಿ ಜಿಲ್ಲೆಯಾದ್ಯಾಂತ ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ, ಸಮಾಜದಲ್ಲಿ ಶಾಮತಿ ನೆಲೆಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ ಹೇಳಿದ್ದಾರೆ.

ಸೋಮವಾರ ಸಂಜೆ ಇಲ್ಲಿನ ಕಂದಾಯ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ತಾಲ್ಲೂಕು ವ್ಯಾಪ್ತಿಯ ಪ್ರಮುಖರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

 Gangolli_peace_ meeting (16) Gangolli_peace_ meeting (11) Gangolli_peace_ meeting (18) Gangolli_peace_ meeting (13) Gangolli_peace_ meeting (14) Gangolli_peace_ meeting (15) Gangolli_peace_ meeting (12) Gangolli_peace_ meeting (10) Gangolli_peace_ meeting (4) Gangolli_peace_ meeting (8) Gangolli_peace_ meeting (6) Gangolli_peace_ meeting (7) Gangolli_peace_ meeting (9) Gangolli_peace_ meeting (5) Gangolli_peace_ meeting Gangolli_peace_ meeting (3) Gangolli_peace_ meeting (2) Gangolli_peace_ meeting (1)

ಯಾವುದೆ ಪರಿಸ್ಥಿತಿಗಳನ್ನು ಪೊಲೀಸ್ ಕ್ರಮಗಳ ಮೂಲಕ ಪರಿಹಾರ ಮಾಡಿದ್ದಲ್ಲಿ ಅದು ತಾತ್ಕಾಲಿಕ ಉಪಕ್ರಮವಾಗುತ್ತದೆ ಎನ್ನುವ ನಂಬಿಕೆಯಲ್ಲಿ, ಸಮಾಜದ ಎಲ್ಲರಲ್ಲಿಯೂ ಪರಸ್ಪರ ಪ್ರೀತಿಯ ಹಾಗೂ ದ್ವೇಷ ರಹಿತವಾದ ವಾತಾವರಣ ನಿರ್ಮಾಣವಾಗಬೇಕು ಎನ್ನುವುದು ಇಲಾಖೆಯ ದ್ಯೇಯವಾಗಿದೆ. ಅನಗತ್ಯವಾದ ಅಪನಂಬಿಕೆ, ವದಂತಿಗಳು ಹಾಗೂ ತಪ್ಪು ತಿಳುವಳಿಕೆಗಳಿಂದಾಗಿ ಸಮಾಜದ ಶಾಂತಿ ಕದಡುವ ಸಂದರ್ಭಗಳು ಎದುರಾದಾಗ ಸಮಾಜದ ಹಿರಿಯರು ಸರಿಯಾದ ಮಾರ್ಗದರ್ಶನ ಮಾಡುವ ಅವಶ್ಯಕತೆಗಳಿವೆ. ಪೊಲೀಸ್ ಇಲಾಖೆಗೆ ಕಟ್ಟು ನಿಟ್ಟಿನ ಕಾನೂನು ಉಪಕ್ರಮಗಳನ್ನು ಕೈಗೊಳ್ಳುವ ಅವಕಾಶಗಳಿದ್ದರೂ, ಕೆಲವೊಂದು ಸಂದರ್ಭದ ಕಾರಣಗಳಿಂದಾಗಿ ತಾಳ್ಮೆ ಹಾಗೂ ಸಹನೆಯನ್ನು ಕಳೆದುಕೊಂಡಿಲ್ಲ ಎಂದು ಅವರು ಸ್ವಷ್ಟ ಪಡಿಸಿದರು.

ಕಾನೂನು ಭಂಗ ಮಾಡುವ ಮನೋಪ್ರವೃತ್ತಿ ಉಳ್ಳವರು, ಈ ಕಾರಣಕ್ಕಾಗಿ ರಾಜಕೀಯ, ಧರ್ಮ, ಜಾತಿ ಆಶ್ರಯಗಳನ್ನು ಹುಡುಕುತ್ತಿರುತ್ತಾರೆ, ಅಂತಹವರಿಗೆ ಸಮಾಜದ ಮುಖಂಡರು ರಕ್ಷಣೆ ನೀಡಬಾರದು. ಪ್ರಚೋದನಕಾರಿ ಸಂಗತಿಗಳ ವಿರುದ್ದ ಇಲಾಖೆ ಕಾನೂನಿನ ಎಲ್ಲ ಅಸ್ತ್ರಗಳನ್ನು ಬಳಸಲಿದೆ ಎಂದು ಸೂಕ್ಷವಾಗಿ ತಿಳಿಸಿದ ಅವರು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಇಲಾಖೆ ಮುಂದಿನ ದಿನಗಳಲ್ಲಿ ನಿರ್ಧಾಕ್ಷೀಣ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಿಲ್ಲಾ ಎಸ್.ಪಿ ಅವರು ಗಂಗೊಳ್ಳಿಯಲ್ಲಿನ ಘಟನಾವಳಿಗಳಿಗೆ ಶೀಘ್ರವಾಗಿ ಸ್ಪಂದಿಸಲು ಅನೂಕೂಲವಾಗುವಂತೆ ಗಂಗೊಳ್ಳಿ ಪೇಟೆಯಲ್ಲಿ ಇರುವ ಪೊಲೀಸ್ ಉಪ ಠಾಣೆಯನ್ನು ಬಲಪಡಿಸಲಾಗುವುದು. ಠಾಣಾಧಿಕಾರಿ ಸಹಿತ, ಹೆಚ್ಚಿನ ಸಿಬ್ಬಂದಿಗಳನ್ನು ಇಲ್ಲಿಗೆ ನಿಯೋಜನೆ ಮಾಡುವ ಬಗ್ಗೆ ಇಲಾಖೆ ತ್ವರಿತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಸಹಾಯಕ ಆಯುಕ್ತೆ ಚಾರುಲತಾ ಸೋಮಾಲ್ ಅವರು ಹಿಂದೆ ನಡೆದ ಘಟನೆಗಳನ್ನೆ ಮತ್ತೆ ಮತ್ತೆ ಪರಾಮರ್ಶೆ ಮಾಡುವುದರಿಂದ, ಸಮಸ್ಯೆ ಪರಿಹಾರವಾಗುದಿಲ್ಲ. ಹಿಂದೆ ನಡೆದಿರುವುದನ್ನು ಮರೆತು ಮುಂದಿನ ಒಳ್ಳೆಯ ದಿನಗಳನ್ನು ಕಾಣುವ ಕುರಿತು ಸಮಾಜದ ಹಿರಿಯರು ಹಾಗೂ ಕಿರಿಯರು ಜೊತೆಯಾಗಿ ಚಿಂತನೆ ನಡೆಸಬೇಕು ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿದ ಮಾತನಾಡಿದ ಆರ್‌ಎಸ್‌ಎಸ್ ಹಿರಿಯ ಮುಖಂಡ ಸುಬ್ರಮಣ್ಯ ಹೊಳ್ಳ ಅವರು ಶಾಂತಿ ಸಭೆಗಳನ್ನು ನಡೆಸುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕು. ಶಾಂತಿಯ ವಾತಾವರಣ ಮೂಡಬೇಕಾದರೆ, ಪೂರ್ವಾಗ್ರಹಗಳು ಮಾಯವಾಗಬೇಕು. ವಾಸ್ತಾವ ವಿಚಾರಗಳ ಕುರಿತು ಪರಿಸ್ಪರ ತಿಳುವಳಿಕೆ ಮೂಡಿಸುವ ಪ್ರಯತ್ನಗಳಾಗಬೇಕು ಎಂದರು.

ಗಂಗೊಳ್ಳಿಯ ಜಾಮೀಯ ಮಸೀದಿಯ ಪ್ರಮುಖರಾದ ಇರ್ಷಾದ್ ಹಾಗೂ ಅಬ್ದುಲ್ ಹಮೀದ್ ಅವರು ಮಾತನಾಡಿ ಘಟನೆಗಳ ವೈಜ್ಞಾನಿಕ ವರದಿಗಳು ಬಂದ ನಂತರ, ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲಿ. ಯಾವುದೆ ಕಾರಣಕ್ಕೂ ನಿರಪರಾಧಿಗಳಿಗೆ ಶಿಕ್ಷೆಯಾಗಕೂಡದು. ರಾಜಕೀಯ ಕಾರಣಗಳಿಂದಾಗಿ ಕೋಮು ಸೌಹಾರ್ಧವನ್ನು ಕೆಡಿಸುವವರ ಕುಟೀಲ ನೀತಿಗೆ ಸಮಾಜಗಳು ಬಲಿಯಾಗ ಬಾರದು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ರಾಜೂ ದೇವಾಡಿಗ ಅವರು ಗಂಗೊಳ್ಳಿಯ ಘಟನೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎನ್ನುವುದು ಎಲ್ಲ ಜನಪ್ರತಿನಿಧಿಗಳ ನಿಲುವಾಗಿದೆ. ಈ ಘಟನೆಗಳಿಗೂ ತನಗೂ ಯಾವುದೆ ಸಂಬಂಧಗಳಿಲ್ಲ, ಕಳೆದ ೯ ತಿಂಗಳಿಂದ ತಾನು ಪೊಲೀಸ್ ಠಾಣೆಗೆ ಹೋಗಿಲ್ಲ, ಆದರೂ ತನ್ನ ಮೇಲೆ ಆರೋಪಗಳು ಬರುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಕುಂದಾಪುರದ ತಹಸೀಲ್ದಾರ್ ಗಾಯತ್ರಿ ನಾಯಕ್, ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ದಿವಾಕರ ಪಿ.ಎಂ, ಸುದರ್ಶನ ಅವರುಗಳು ಸಮಾಜದಲ್ಲಿ ಶಾಂತಿ ಕಾಪಾಡುವ ಹೊಣೆ ಕಂದಾಯ ಹಾಗೂ ಪೊಲೀಸ್ ಇಲಾಖೆಗೆ ಇದೆ. ಈ ಕುರಿತು ಅಗತ್ಯವಿರುವ ಎಲ್ಲ ಕಾನೂನು ಉಪಕ್ರಮಗಳನ್ನು ಬಳಸಿಕೊಳ್ಳುವುದಾಗಿ ತಿಳಿಸಿದರು.

ಕುಂದಾಪುರ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಮಹೇಶ್‌ಕುಮಾರ ಕೋಡಿ, ಧರ್ಮಗುರುಗಳಾದ ಎ.ಖಾಸಿಂ, ತಬ್ರೇಜ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.

Write A Comment