ಕನ್ನಡ ವಾರ್ತೆಗಳು

ಉಡುಪಿ: ಇಶಿಕಾ ಶೆಟ್ಟಿ ಪೋಷಕರ ವಶಕ್ಕೆ..?

Pinterest LinkedIn Tumblr

Eshika Shetty_Missing_SRS School

ಉಡುಪಿ:  ನ. 15ರಂದು ನಾಪತ್ತೆಯಾದ ನಗರದ ಶಾರದಾ ರೆಸಿಡೆನ್ಷಿಯಲ್ ಸ್ಕೂಲಿನ 8ನೆಯ ತರಗತಿ ವಿದ್ಯಾರ್ಥಿನಿ ಇಶಿಕಾ ಶೆಟ್ಟಿ ಸೋಮವಾರ ಪೋಷಕರ ವಶಕ್ಕೆ ಬಂದಿದ್ದಾಳೆ ಎನ್ನಲಾಗಿದೆ.

ಇಶಿಕಾ ಎಸ್‌. ಶೆಟ್ಟಿ ನಟ ಫೈಜಲ್‌ಖಾನ್‌ ನನಗಿಷ್ಟ ಎಂದು ಪತ್ರ ಬರೆದು  ಶಾಲೆಯ ವಸತಿ ನಿಲಯದಿಂದ ನಾಪತ್ತೆ ಆಗಿದ್ದಳು. ಮುಂಬೈ ಛತ್ರಪತಿ ಶಿವಾಜಿ ಟರ್ಮಿನಸ್‌ ರೈಲು ನಿಲ್ದಾಣ ಬಳಿ ಸಿಕ್ಕಿದ್ದ ಇಶಿಕಾಳನ್ನು ರೈಲ್ವೆ ಪೊಲೀಸರು ಸ್ಟೇಟ್‌ ಹೋಮ್‌ಗೆ ಸೇರಿಸಿದ್ದರು. ಸೋಮವಾರ ಇಶಿಕಾಳನ್ನು ಪೋಷಕರ ವಶಕ್ಕೆ ಹಸ್ತಾಂತರಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದೇ ವೇಳೆ ಪೋಷಕರು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಹಿಂದಕ್ಕೆ ಪಡೆದಿರುವುದರಿಂದ ಅರ್ಜಿ ವಜಾಗೊಂಡಿದೆ. ಆದ್ದರಿಂದ ಆಕೆಯನ್ನು ಉಚ್ಚ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾದ ಅಗತ್ಯವಿಲ್ಲ. ಇನ್ನು ಆಕೆಯನ್ನು ನೇರವಾಗಿ ಉಡುಪಿಗೆ ಕರೆತರಬಹುದು ಎನ್ನಲಾಗಿದೆ.್

Write A Comment